ವಿಷಯಕ್ಕೆ ಹೋಗಿ
ಮಂಗಳೂರು ಡೈರಿ. ಭಾಗ-೨

ಸಕತ್ ಹಾಟ್ ಮಗಾ..!

ಸಧ್ಯ ಮಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಜಡಿ ಮಳೆ ಗುಡಿಸಿಹಾಕುತ್ತಿತ್ತು. ಈಗ ಮಳೆ ಸ್ವಲ್ಪ ಕಡಿಮೆಯಾದ ಕಾರಣಕ್ಕೇನೋ ಬಿಸಿಲಿನ ತಾಪ ಹೆಚ್ಚುತ್ತಿರುವುದು ಬೆನ್ನಲ್ಲಿ ಮೂಡುತ್ತಿರುವ ಬೆವರಿನ ಸಾಲುಗಳು ತಿಳಿಸುತ್ತಿವೆ.
ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ಸ್ಥಳೀಯರು, ‘ನೀವು ಬೇಸಿಗೆಯಲ್ಲಿ ಇಲ್ಲಿರಬೇಕು. ಆಗ ಬಿಸಿಲು ಎಂದರೆ ಏನು ಎಂದು ಗೊತ್ತಾಗುತ್ತದೆ’ ಎಂದು ಬೆದರಿಸುತ್ತಿದ್ದಾರೆ. ನಾನು ಕೆಲಸ ಮಾಡುವ ಪತ್ರಿಕಾ ಕಚೇರಿ ಮಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವುದರಿಂದ ಇಲ್ಲಿ ದಿನನಿತ್ಯ ಬಿಸಿಲಲ್ಲಿ ದುಡಿಯುವ ಕಾರ್ಮಿಕರ ಸಮೂಹವೇ ಕಾಣುತ್ತದೆ. ಮಾಸಲು ಬಟ್ಟೆಯ, ಸಾಧಾರಣ ಉಡುಗೆಯ ಸ್ವಲ್ಪ ಕಂದು ಬಣ್ಣದ ವ್ಯಕ್ತಿತ್ವಗಳು. ನಾನಾದರೂ ಆಫೀಸಿನ -ನಿನ ಕೆಳಗೆ ಕುಳಿತು ಕೆಲಸ ಮಾಡುವುದು, ಇವರಂತೆ ಬಿಸಿಲಿನಲ್ಲಿ ದುಡಿಯುತ್ತಿಲ್ಲವಲ್ಲ ಎಂಬ ಸಮಾದಾನವನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ.

ಮಂಗಳೂರೆಂದರೆ ಘಟ್ಟದ ಕೆಳಗಿನ ಊರು, ಸಮುದ್ರ ಅಂತೆಲ್ಲ ಕಲ್ಪನೆಗಳಿದ್ದವು ಅಷ್ಟೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದುವಾಗ ಘಟ್ಟದ ಕೆಳಗಿನ ಕೂಲಿಯಾಳುಗಳ ಚಿತ್ರಣ ಬರುತ್ತದೆ. ಆದರೆ ಇವತ್ತು ಮಂಗಳೂರು ಎಂದರೆ ದುಬೈ ದುಡ್ಡಿನಿಂದ ಶ್ರ್ರೀಮಂತವಾದ ಪ್ರದೇಶ ಎಂದು ಸ್ನೇಹಿತರು ಹೇಳುತ್ತಾರೆ. ಆದರೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದಿನನಿತ್ಯ ಕಾಣುವ ಜೀವಗಳು ಸ್ನೇಹಿತರ ಮಾತುಗಳನ್ನು ಅಣಕಿಸುತ್ತಿದ್ದಾರೆ.

ಇನ್ನೆಷ್ಟು ದಿನ ಇಲ್ಲಿ ಕಾಲ ಹಾಕಬೇಕೊ ಗೊತ್ತಿಲ್ಲ. ಆದರೆ ಇಲ್ಲಿನ ಪತ್ರಿಕೆಗಳನ್ನು ಓದುವ ಶಿಕ್ಷೆ ಮಾತ್ರ ತಪ್ಪದ್ದಲ್ಲ ಎಂಬುದು ಮೊದಲಿನ ದಿನವೇ ಗಮನಕ್ಕೆ ಬಂತು. ಇಲ್ಲಿನ ಸ್ಥಳೀಯ ಪತ್ರಿಕೆಗಳ ಮುಖಪುಟವೆಲ್ಲ ಕೆಂಪು ಕೆಂಪು..! ಎಂತಹ -ಟೋಗಳನ್ನು ಅಚ್ಚುಹಾಕುತ್ತಾರೆ ಎಂದರೆ, ರಾತ್ರಿ ನೋಡಿ ಮಲಗಿದರೆ ಕೆಟ್ಟ ಕನಸು ಬೀಳುವುದು ಖಂಡಿತ. ಬರೀ ಕೊಲೆ, ಅಪಘಾತದ ಕ್ರೈಂ ಸುದ್ಧಿಗಳೇ.
ನಿಮಗೆ ತಿಗಣೆಗಳ ಗೊತ್ತಿರಬೇಕು. ಬಿಸಿಲು ಹೆಚ್ಚಾಗಿರು ಕಡೆಗಳಲ್ಲಿ ಈ ಬೆಡ್ ಬಗ್ಸ್‌ಗಳದ್ದು ವಿಪರೀತ ಕಾಟ. ನನಗೆ ಇವು ಕೊಟ್ಟ ಕಾಟಕ್ಕೆ ಒಮ್ಮೆ ತಿಗಿಣೆಗಳ ಕುರಿತು ಸಂಶೋಧನೆ ಮಾಡಬೇಕು ಅಂದುಕೊಂಡಿದ್ದು ಇದೆ. ಅಂತರ್‌ಜಾಲದಲ್ಲಿ ಕೆಲವು ವಿಚಿತ್ರ ಮಾಹಿತಿಗಲು ಸಿಗುತ್ತವಾದರೂ ತಿಗಣೆಗಳಿಂದ ನನಗಾದ ಅನುಭವಕ್ಕೆ ಹತ್ತಿರವಾದ ವಿಚಾರಗಲು ಸಿಗಲಿಲ್ಲ. ನಮ್ಮಮ್ಮ ತಿಗಣೆಗಳ ವಿಚಾರದಲ್ಲಿ ಸ್ವಾರಸ್ಯಕರವಾಗಿ ಮಾತನಾಡುತ್ತಾರೆ. ನಮ್ಮ ಮಲೆನಾಡಿನಲ್ಲಿ ಹಿಂದೆ ಈಚಲು ಚಾಪೆಗಳನ್ನು ಬಳಸುತ್ತಿದ್ದರಂತೆ. ಅದರಲ್ಲೂ ಬಾಣಂತನದ ಸಮಯದಲ್ಲಿ ಹೆಂಗಸರಿಗೆ ತಿಗಣೆಗಳಿಂದ ರಕ್ಷಣೆ ನೀಡುವುದೇ ಹರಸಾಹಸವಾಗಿತ್ತಂತೆ. ಮಳೆಗಾಲದಲ್ಲಿ ಬಾಣಂತನ ಮಾಡುವುದೇ ಇಂದು ಕಷ್ಟವಾದರೆ ಈ ತಿಗಣೆಗಳನ್ನು ನಾಶಪಮಾಡುವುದು ಮತಂದು ಕಷ್ಡದ ವಿಚಾರವಾಗಿತ್ತಂತೆ. ಮನೆಯ ಗೋಡೆಗಳೆಲ್ಲ ತಿಗಣೆಗಳನ್ನು ಒರೆದ ಕಲೆಗಲಿಂದ ಕೆಂಪಾಗಿ ಎಲೆ ಅಡಿಕೆ ಎಂಜಲನ್ನು ಉಗಿದ ಹಾಗೆ ಆಗಿರುತ್ತಿತ್ತು ಎಂದು ಅಮ್ಮ ನೆನಪಿಸಿಕೊಳ್ಳುತ್ತಿದ್ದರು.

ಈ ತಿಗಣೆಗಳ ಕುರಿತು ಇನ್ನು ಸ್ವಾರಸ್ಯಕರ ಸ್ವ ಅನುಭವಗಳಿವೆ. ಅದನ್ನೆಲ್ಲಾ ಮುಂದೆ ಎಂದಾದರೂ ಬರೆಯುತ್ತೇನೆ. ಇಲ್ಲಿ ತಿಗಣೆಗಳ ವಿಚಾರ ಯಾಕೆ ಬಂತು ಎಂದರೆ ಈಗ ಮಂಗಳೂರಿನಲ್ಲಿ ವಿಪರೀತ ತಿಗಣೆಕಾಟ. ನಾನಿರುವ ಆಫೀಸಿನಲ್ಲಿ ಎಲ್ಲರೂ ಒಗ್ಗಿಹೋಗಿದ್ದಾರೆ. ಹಾಗಾಗಿ ದಿನನಿತ್ಯ ಲೀಟರ್‌ಗಟ್ಟಲೆ ರಕ್ತದಾನ ನಡೆಯುತ್ತಿದೆ. ಹಾಗೆಯೆ ಮುಂದುವರಿಯಲಿ ಎಂದು ಆಶಿಸುತ್ತಾ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ