ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್ 4, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಮಂಗಳೂರು ಡೈರಿ. ಭಾಗ-೩ ತೇಜಸ್ವಿ ಜೊತೆ ನಡೆಯದ ಸಂವಾದ ಪಿಯುಸಿಯ ದಿನಗಳು. ಬಹುಷ ೨೦೦೨ ಇರಬೇಕು. ಅವತ್ತಿಗಾಗಲೇ ಗುಜರಾತ್ ನರಮೇಧ ನಡೆದುಹೊಗಿತ್ತು. ಕರ್ನಾಟಕದ ಬಹುತೇಕ ಬುದ್ದಿಜೀವಿಗಳು ಬಾಬಾಬುಡನ್ ಗಿರಿ ವಿವಾದದಲ್ಲಿ ಸಂಘಪರಿವಾರದ ನಿಲುವನ್ನು ಪ್ರತಿಭಟಿಸಿ ಸುದ್ಧಿಯಲ್ಲಿದ್ದರು. ಆಗಷ್ಟೆ ಹೋರಾಟವೆಂಬ ವಿಸ್ಮಯಕಾರಿ ಜಗತ್ತಿಗೆ ನಾನು ಕಾಲಿಡುತ್ತಿದ್ದ ದಿನಗಳು. ತೀರ್ಥಹಳ್ಳಿಯಲ್ಲಿ ಪಿಯುಸಿಗೆ ಸೇರಿದ್ದೆ. ಮನೆಯಲ್ಲಿ ಸೈನ್ಸ್ ಕೊಡಿಸಿದ್ದರು. ಮಗ ಮುಂದೆ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿ ಎಂಬ ದೂರದ ನಿರೀಕ್ಷೆ ಅಪ್ಪ, ಅಮ್ಮಂಗೆ ಇತ್ತು. ಆದರೆ ನನಗೆ ಪತ್ರಿಕೋದ್ಯಮ ಹುಚ್ಚು ಅಂಟಿಕೊಂಡಿತು. ಅಲ್ಲಿನ ಸ್ಥಳೀಯ ಪತ್ರಿಕೆ ವಿನೂತನ ಮಾತುಕತೆಯಲ್ಲಿ ಸಂಬಳವಿಲ್ಲದ ಕೆಲಸಕ್ಕೆ ಸೇರಿದ್ದೆ. ಆಗ ಇದ್ದದ್ದು ನಾನು ಬರೆಯಬೇಕು, ಹೆಸರು ಮಾಡಬೇಕು ಎಂಬ ಕಲ್ಪನೆಗಳು ಅಷ್ಟೆ. ಆದರೆ ಹೆಚ್ಚು ಕಡಿಮೆ ಅವತ್ತು ನನಗೆ ಗಾಡ್ ಫಾದರ್ ರೂಪದಲ್ಲಿದ್ದ ನೆಂಪೆ ದೇವರಾಜ್ ತೀರ್ಥಹಳ್ಳಿಯಲ್ಲಿ ಸಾಮಾಜಿಕ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಅವರಿಂದಲೇ ನನಗೆ ಬಾಬಾಬುಡನ್ ಗಿರಿ ವಿವಾದದ ಪರಿಚಯವಾಗಿತ್ತು. ಸಂಘಪರಿವಾರದ ಶಾಲೆಯಲ್ಲಿ ಓದಿ ಬೆಳೆದಿದ್ದರೂ, ಅವತ್ತಿಗಾಗಲೇ ಕುವೆಂಪು, ತೇಜಸ್ವಿ ಬರಹಗಳಿಂದ ಆರೆಸ್ಸೆಸ್‌ನ ಹುಸಿ ದೇಶ ಪ್ರೇಮ ಮೈಬಿಟ್ಟು ಹೋಗಿತ್ತು. ಚಿಕ್ಕಮಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆಯ ಎರಡನೆ ವರ್ಷದ ಕಾರ್ಯಕ್ರಮ. ತೀರ್ಥಹಳ್ಳಿಯ ಸಹೃದಯರು, ಕೆಲವು ಹಳೆಯ ತಲೆಮಾ