ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ 24, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಮುಂಜಾನೆ ಹೊತ್ತಲ್ಲಿ ಸಂಭವಿಸಿದ ಎರಡು ಆತ್ಮಹತ್ಯೆಗಳ ಕುರಿತು ಪ್ರಶಾಂತ್ ಹುಲ್ಕೋಡು ಮೇ.೨೩, ೨೦೦೯ ಹಾಗೂ ಜು.೨೩, ೨೦೦೯. ಈ ಎರಡು ದಿನಗಳ ಮುಂಜಾವು ಆರಂಭಗೊಂಡಿದ್ದು ಆತ್ಮಹತ್ಯೆಗಳ ಮೂಲಕ ! ದಕ್ಷಿಣ ಕೊರಿಯಾದಲ್ಲಿ ಮೇ.೨೩ರಂದು ಮುಂಜಾವು ಆಗಷ್ಟೇ ಬಿಚ್ಚಿಕೊಳ್ಳುತ್ತಿತ್ತು. ದೇಶದ ಮಾಜಿ ಅಧ್ಯಕ್ಷ ರೋ ಮೊ ಯುನ್ ನೋಡಿದ ಕೊನೆಯ ಬೆಳಗಿನ ಜಾವವದು. ಮಿಲಿಯಾಂತರ ಡಾಲರ್‌ಗಳ ಹಗರಣದಲ್ಲಿ ವಿಚಾರಣೆಗೆ ಒಳಗಾಗಿದ್ದರೋ ವಿಪರೀತ ಪಾಪಪ್ರeಯಿಂದ ನರಳುತ್ತಿದ್ದರು. ಅವರಿಗೆ ತಾನು ಆಳಿದ ಜನರ ಎದುರಿಗೆ ಮುಖ ತೋರಿಸುವುದೇ ಅವಮಾನಕರ ಎಂಬ ಭಾವನೆ ಮೂಡಿ ಬಹಳ ದಿನಗಳೇ ಆಗಿದ್ದವು. ಅದೇನನ್ನಿಸಿತೋ ಏನೋ ರೋ ತಮ್ಮ ಆತ್ಮಹತ್ಯೆಗೆ ಅಂತಹದೊಂದು ಮುಂಜಾವನ್ನು ಆಯ್ದುಕೊಂಡರು. ತಮ್ಮ ಮನೆಯ ಹಿಂಬದಿಯ ಬೆಟ್ಟದ ಸಾಲುಗಳ ಮೇಲಿಂದ ಒಂದೇ ನೆಗೆತ. ರೋ ಇತಿಹಾಸವಾಗಿ ಹೋದರು. ಇಂತಹುದೆ ಒಂದು ಮುಂಜಾವುಗೆ ಬೆಂಗಳೂರು ತೆರೆದುಕೊಂಡಿದ್ದು ಜುಲೈ ೨೩ರಂದು. ಬಿಬಿ‌ಎಂಪಿಯ ಸಹಾಯಕ ಆಯುಕ್ತ ಲಕ್ಷ್ಮಣ್ ಬೆಳಗ್ಗೆ ವಾಕಿಂಗ್ ಎಂದು ಬನಶಂಕರಿಯ ತಮ್ಮ ಮನೆಯಿಂದ ಹೊರಟವರು ಸೀದಾ ತಮ್ಮ ಕಚೇರಿ ತಲುಪಿದರು. ಅದೇನು ಯೋಚಿಸಿದರೊ, ಜನರಿಗೆ ಮುಖ ತೋರಿಸಲು ಹಿಂಸೆಯಾಗುತ್ತಿದೆ ಎಂದು ಪತ್ರಬರೆದಿಟ್ಟ ಲಕ್ಷಣ್ ನೇಣು ಬಿಗಿದುಕೊಂಡರು. ಇವರು ಮಾರ್ಚ್ ೧೮ರಂದು ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಅವರ ಮೇಲೂ ಕೋಟಿ ರೂಪಾಯಿ ಲಂಚದ ಆರೋಪವಿತ್ತು. ಮೇಲ್ನೋಟಕ್ಕೆ ಈ ಎರಡು ಸಾವುಗಳು ಪ್ರಪಂಚದಲ್ಲಿ ದಿನನಿತ್ಯ ಸಂಭವಿಸು