ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್ 11, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಮಂಗಳೂರು ಡೈರಿ ಕೊನೆಯ ಭಾಗ ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...! ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ. ಇದು ಸರಕಾರಿ ಕಡತಗಳಲ್ಲಿ ಅಧಿಕೃತತೆ ಹೊಂದಿರಬಹುದೇನೋ, ಆದರೆ ಜನ ಸಂಸ್ಕೃತಿ ಭಾಷೆಗಳಲ್ಲಿ ತಮ್ಮದೆ ಹೆಸರಗಳನ್ನು ಮಂಗಳೂರಿಗೆ ನೀಡಿದ್ದಾರೆ. ತುಳು ಭಾಷಿಕರು ಇದನ್ನು ‘ಕುಡ್ಲ’ ಎನ್ನುತ್ತಾರೆ. ಬ್ಯಾರಿ ಮಾತನಾಡುವವರಿಗೆ ಇದು ‘ಮೈಕಳ’ವಾಗಿದೆ. ಹತ್ತಿರದ ಕೇರಳಿಗರ ಮಲೆಯಾಳಂನಲ್ಲಿ ಇದು ‘ಮಂಗಳಾಪುರ’. ಪುಸ್ತಕ ಪ್ರೀತಿ, ಅಕ್ಷರ ಪ್ರೀತಿಗಳು ಇಲ್ಲಿ ಹೆಚ್ಚು ಕಾಣಸಿಗುತ್ತವೆ. ಜೀವನಾನುಭವವನ್ನು ಕತೆಯಾಗಿಸಿದ ಅದ್ಭುತ ಕತೆಗಾರರು ದಕ್ಷಿಣ ಕನ್ನಡದಿಂದ ಮೂಡಿ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಕಂಡಿದ್ದು ಮಂಗಳೂರಿನ ಬದಲಾದ ಪರಿಸ್ಥಿತಿ. ಸೃಜನಶೀಲತೆಗಿಂತ ಇಲ್ಲಿ ಧಾರ್ಮಿಕ ಕಟ್ಟಳೆಗಳು ಬಹುಮುಖ್ಯವಾಗಿ ಕಾಡುತ್ತವೆ. ಇವತ್ತು ಧರ್ಮ ಐಡೆಂಟಿಟಿ ನೀಡುತ್ತಿದೆ. ಹಿಂದುತ್ವ ಪ್ರಬಲವಾಗುತ್ತಿರುವ ಜೊತೆಯಲ್ಲೇ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ತಮ್ಮ ಧಾರ್ಮಿಕ ಐಡೆಂಟಿಟಿಗಾಗಿ ಸೆಣಸಾಡುತ್ತಿದ್ದಾರೆ. ಇಲ್ಲಿನ ಮತ್ತೊಂದು ವಿಶೇಷ ಸಂಜೆ ಪತ್ರಿಕೆಗಳದ್ದು. ಮುಖ ಪುಟದ ತುಂಬಾ ಭೀಕರ ಚಿತ್ರಗಳನ್ನು ಹೊತ್ತು ಬರುವ ಸಂಜೆ ಪತ್ರಿಕೆಗಳು ಮದ್ಯ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ