ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್ 15, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ತಿಗಣೆಗಳ ಜೊತೆ ‘ಲಿವಿಂಗ್ ಟುಗೆದರ್’! ಮನುಷ್ಯ ಯಾವಾಗಲು ಪಕೃತಿ ಸಹಜತೆಯನ್ನು ತನ್ನ ಪರಿಧಿಯೊಳಗೆ ತರಲು ಹೆಣಗುತ್ತಲೇ ಇರುತ್ತಾನೆ. ಆದರೂ ಕೆಲವೊಮ್ಮೆ ಅವನಿಗೆ ಸವಾಲಾಗುವ ಕ್ಷುಲ್ಲಕ ಜೀವಿಗಳು ಅಂಕೆಗೆ ಸಿಗದ ಸವಾಲುಗಳನ್ನು ಒಡ್ಡುತ್ತಿರುತ್ತವೆ. ತೇಜಸ್ವಿಯವರ ಮಿಲೇನಿಯಂ ಸರಣಿಯಲ್ಲಿ ಇಲಿಗಳ ಕತೆಯನ್ನು ಓದಿರಬಹುದು. ಇಲ್ಲಿ ಸಾಮಾನ್ಯ ಮೂಷಿಕ ಸಮುದಾಯವನ್ನು ಕೊಲ್ಲಲು ಪ್ರಪಂಚದಾದ್ಯಂತ ಹಮ್ಮಿಕೊಂಡ ಯೋಜನೆಗಳು ಸ್ವಾರಸ್ಯಕರವಾಗಿ ತೆರೆದುಕೊಳ್ಳುತ್ತವೆ. ಬೇಸಿಗೆಯಲ್ಲಿ ಸೊಳ್ಳೆ ಕಾಟಕ್ಕೆ ಪರದೆಗಳು, ಮ್ಯಾಟ್‌ಗಳು, ಕಾಯಿಲ್‌ಗಳು, ಫ್ಯಾನ್‌ಗಳು ಹಾಗೂ ಸಾಂಬ್ರಾಣಿ ಹೊಗೆಯ ಮೊರೆಹೋಗುವುದು ಸಾಮಾನ್ಯ. ಇದು ಮತ್ತೊಂದು ಕ್ಷುಲ್ಲಕ ಜೀವಿ ನನ್ನ ಜೀವನದಲ್ಲಿ ಸವಾಲಾಗಿ ಕಾಡಿದ ಕತೆ. ತಿಗಣೆಗಳ ವಿಚಾರ ಗೊತ್ತಿರಬಹುದು ಅಥವಾ ಅವುಗಳ ಉಪಟಳಕ್ಕೆ ನೀವೂ ತುತ್ತಾಗಿರಬಹುದು. ನಾನು ಪಿಯುಸಿ ಮುಗಿಸುವವರೆಗೂ ತಿಗಣೆಗಳ ಹೆಸರು ಕೇಳಿದ್ದೆನೇ ಹೊರತು ನೋಡುವ ‘ಭಾಗ್ಯ’ ಲಭಿಸಿರಲಿಲ್ಲ. ಸಿನಿಮಾ ಮಂದಿರಗಳಲ್ಲಿ ತಿಗಣೆಗಳು ಇರುತ್ತವೆ ಎಂದು ಹೇಳುತ್ತಿದ್ದರೂ ನಾನು ಸಿನಿಮಾ ನೋಡಲು ಹೋದಾಗ, ಅಲ್ಲಿನ ಕತ್ತಲಿನ ಕಾರಣಕ್ಕೋ, ಸಿನಿಮಾ ಮೋಡಿಗೋ ತಿಗಣೆಗಳ ವಿಚಾರ ಮರೆತು ಹೋಗಿರುತ್ತಿತ್ತು. ಮಲೆನಾಡಿನಲ್ಲಿ ಹಿಂದೆ ತಿಗಣೆಗಳ ಕಾಟ ತುಂಬಾ ಇರುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದರು. ಅವಾಗೆಲ್ಲ್ಲ ಈಚಲು ಗರಿಯಿಂದ ಮಾಡಿದ ಚಾಪೆಗಳನ್ನು ಬಳಸುತ್ತಿದ್ದರು. ಈ ಚಾಪೆಗಳು ತಿಗಣೆಗಳಿಗೆ ತಮ್ಮ ಜೀ