ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ 1, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಆರೆಸ್ಸೆಸ್ ಕುರಿತು ಒಂದು ಟಿಪ್ಪಣಿ photo:indiawire ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮರ್ಥ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ. ಬ್ರಾಹ್ಮಣಶಾಹಿಗಳು, ಚಡ್ಡಿಗಳು, ಫ್ಯಾಸಿಸ್ಟರು ಹೀಗೆ ಹಲವಾರು ಉಪಮೇಯಗಳು ಕಳೆದ ೮೦ ವರ್ಷಗಳಲ್ಲಿ ಆರೆಸ್ಸೆಸ್‌ಗೆ ಅನ್ವರ್ಥವಾಗಿ ಹುಟ್ಟಿಕೊಂಡರು ದೇಶಭಕ್ತರು ಎಂಬ ಪಟ್ಟವನ್ನು ಸಂಘ ಯಾರಿಗೂ ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ ಕೊಟ್ಟರು ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ ಪರದೇಶ ವಿರೋಧಿ ಭಾರತ ಪ್ರೇಮ ಆಳವಾಗಿ ಬೇರುಬಿಟ್ಟಿದೆ. ಇವತ್ತಿಗೆ ಆರೆಸ್ಸೆಸ್ ಕುರಿತು ಏಕಮುಖವಾದ ವಿರೋಧದ ಅಥವಾ ಕುರುಡು ಅಭಿಮಾನದ ಸಾಹಿತ್ಯಗಳು ಲಭ್ಯವಾಗುತ್ತವೆಯೇ ಹೊರತು ಆರೆಸ್ಸೆಸ್‌ನ ಸಂಘಟನೆಯ ಆಳ, ಅದು ಬೆಳೆಯುತ್ತಿರುವ ವೇಗದ ಕುರಿತು ಗಂಭೀರ ಬರಹಗಳು ವಿರಳ. ಕೋಮುವಾದಕ್ಕೆ ಪರ್ಯಾಯವಾಗಬೇಕಿದ್ದ ಜಾತ್ಯಾತೀತವಾದ ಜನರಿಗೆ ಒಂದು ಕೋಮಿನ ಪರವಾದ ನಿಲುವು ಎಂಬತೆ ಕಾಣುತ್ತಿರುವುದಕ್ಕೆ ಇದು ಕಾರಣವಿರಬಹುದು. ೧೯೨೦ರ ಸುಮಾರಿಗೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರದ ಸಿದ್ಧಾಂತ ಭಾರತದ ರಾಜಕೀಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿರಲಿಲ್ಲ. ಹಿಂದುತ್ವದ ಪ್ರತಿಪಾದನೆಗಾಗಿ ೧೯೨೫ರಲ್ಲಿ ಕೇಶವ ಬಲಿರಾಮ್ ಹೆಡ್ಗೆ