ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್ 9, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ದಲ್ಲಿ ೨೦೦೯. ಜುಲೈ,28ರಲ್ಲಿ ಪ್ರಕಟವಾದ ಲೇಖನ ನಮಗೆ ಈತ ಭಯೋತ್ಪಾದಕ. ಅವರಿಗೆ ಬರೀ ‘ಬಂದೂಕುಧಾರಿ!’ ಪ್ರಶಾಂತ್ ಹುಲ್ಕೋಡು ಮಂಗಳವಾರ, 2009 (06:04 IST) ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗೊತ್ತಲ್ಲ. ಅದೇ ಮುಂಬೈ ದಾಳಿ ಪ್ರಕರಣದಲ್ಲಿ ಸೆರೆ ಸಿಕ್ಕ ಏಕೈಕ ಆರೋಪಿ. ಸಧ್ಯ ಪ್ರಪಂಚದ ಮಾಧ್ಯಮಗಳ ಮುಖ ಪುಟದಲ್ಲಿ ಕಸಬ್ ಜಾಗ ಪಡೆದುಕೊಂಡಿದ್ದಾನೆ. ವಿಶೇಷ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ತನ್ನ ಉಡಾಫೆ- ಹಾಗೂ ವಿಚಿತ್ರ ನಡವಳಿಕೆಗಳಿಂದ ಎಲ್ಲರ ಗಮನ ಸೆಳೆದಿರುವ ಕಸಬ್ ಕುರಿತಾದ ಲೇಟೆಸ್ಟ್ ಸುದ್ಧಿಯೊಂದು ಬಂದಿದೆ. ಏನಪ್ಪ ಅಂದ್ರೆ, ಕಸಬ್ ಹಾಗು ಆತನ ಉಳಿದ ೯ ಜನ ಕಳೆದ ನವೆಂಬರ್‌ನಲ್ಲಿ ಮುಂಬೈ ಎಂಬ ಮಹಾನಗರಿಗೆ ಲಗ್ಗೆ ಇಟ್ಟದ್ದು ನಿಮಗೆ ಗೊತ್ತೇ ಇದೆ. ಈಗ ಅವರ ಕೃತ್ಯವನ್ನು ಏನೆಂದು ಕರೆಯಬೇಕು ಎಂದು ಸುದ್ಧಿ ಮನೆಗಳ ಪದ ಪ್ರಯೋಗಶಾಲೆಯಲ್ಲಿ ಸಾಣೆ ಹಿಡಿಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಕಸಬ್ ವಿಚಾರಣೆಗಳನ್ನು ವರದಿ ಮಾಡುತ್ತಿರುವ ಅಮೆರಿಕಾದ ಬಹುತೇಕ ಮಾಧ್ಯಮಗಳು ಕಸಬ್‌ನನ್ನು ಭಯೋತ್ಪಾದಕ ಎಂದು ಕರೆಯುತ್ತಿಲ್ಲ. ನ್ಯೂಯಾರ್ಕ್ ಟೈಮ್ಸ್‌ನಿಂದ ಹಿಡಿದು ವಾಲ್ ಸ್ಟ್ರೀಟ್ ಜರ್ನಲ್‌ವರೆಗೆ ಕಸಬ್ ಗನ್ ಮ್ಯಾನ್ ಅಷ್ಟೆ. ಅಮೆರಿಕಾದ ಪತ್ರಿಕೆಗಳ ಈ ಪದ ಪ್ರಯೋಗ ಸುದ್ಧಿ ಪತ್ರಿಕೆಗಳಲ್ಲಿ ಭಾಷೆ ಬಳಕೆಯ ಕುರಿತಾದ ಹೊಸ ಚರ್ಚೆಗೆ ಕಾರಣವಾಗಿದೆ. ಕಸಬ್ ನ್ಯಾಯಾಲಯದಲ್ಲಿ ಇದ್ದಕ್ಕಿದ್ದ ಹಾಗೆ ‘ನಾನು ತಪ್ಪು ಮಾಡಿದ್ದೇನೆ, ನನ್ನನ್ನು ಗಲ್ಲಿಗೇರಿಸಿ’ ಎಂದು