ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ 28, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಮಂಗಳೂರು ಡೈರಿ. ಭಾಗ-೨ ಸಕತ್ ಹಾಟ್ ಮಗಾ..! ಸಧ್ಯ ಮಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಜಡಿ ಮಳೆ ಗುಡಿಸಿಹಾಕುತ್ತಿತ್ತು. ಈಗ ಮಳೆ ಸ್ವಲ್ಪ ಕಡಿಮೆಯಾದ ಕಾರಣಕ್ಕೇನೋ ಬಿಸಿಲಿನ ತಾಪ ಹೆಚ್ಚುತ್ತಿರುವುದು ಬೆನ್ನಲ್ಲಿ ಮೂಡುತ್ತಿರುವ ಬೆವರಿನ ಸಾಲುಗಳು ತಿಳಿಸುತ್ತಿವೆ. ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ಸ್ಥಳೀಯರು, ‘ನೀವು ಬೇಸಿಗೆಯಲ್ಲಿ ಇಲ್ಲಿರಬೇಕು. ಆಗ ಬಿಸಿಲು ಎಂದರೆ ಏನು ಎಂದು ಗೊತ್ತಾಗುತ್ತದೆ’ ಎಂದು ಬೆದರಿಸುತ್ತಿದ್ದಾರೆ. ನಾನು ಕೆಲಸ ಮಾಡುವ ಪತ್ರಿಕಾ ಕಚೇರಿ ಮಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವುದರಿಂದ ಇಲ್ಲಿ ದಿನನಿತ್ಯ ಬಿಸಿಲಲ್ಲಿ ದುಡಿಯುವ ಕಾರ್ಮಿಕರ ಸಮೂಹವೇ ಕಾಣುತ್ತದೆ. ಮಾಸಲು ಬಟ್ಟೆಯ, ಸಾಧಾರಣ ಉಡುಗೆಯ ಸ್ವಲ್ಪ ಕಂದು ಬಣ್ಣದ ವ್ಯಕ್ತಿತ್ವಗಳು. ನಾನಾದರೂ ಆಫೀಸಿನ -ನಿನ ಕೆಳಗೆ ಕುಳಿತು ಕೆಲಸ ಮಾಡುವುದು, ಇವರಂತೆ ಬಿಸಿಲಿನಲ್ಲಿ ದುಡಿಯುತ್ತಿಲ್ಲವಲ್ಲ ಎಂಬ ಸಮಾದಾನವನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಮಂಗಳೂರೆಂದರೆ ಘಟ್ಟದ ಕೆಳಗಿನ ಊರು, ಸಮುದ್ರ ಅಂತೆಲ್ಲ ಕಲ್ಪನೆಗಳಿದ್ದವು ಅಷ್ಟೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದುವಾಗ ಘಟ್ಟದ ಕೆಳಗಿನ ಕೂಲಿಯಾಳುಗಳ ಚಿತ್ರಣ ಬರುತ್ತದೆ. ಆದರೆ ಇವತ್ತು ಮಂಗಳೂರು ಎಂದರೆ ದುಬೈ ದುಡ್ಡಿನಿಂದ ಶ್ರ್ರೀಮಂತವಾದ ಪ್ರದೇಶ ಎಂದು ಸ್ನೇಹಿತರು ಹೇಳುತ್ತಾರೆ. ಆದರೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದಿನನಿತ್ಯ ಕಾಣುವ