ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ!
ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ!
ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾರಿಕೆಗಾಗಿ ಬೆಳಗ್ಗೆಯಿಂ…
ಇತ್ತೀಚಿನ ಪೋಸ್ಟ್‌ಗಳು
ಆರೆಸ್ಸೆಸ್ ಕುರಿತು ಒಂದು ಟಿಪ್ಪಣಿ

ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮರ್ಥ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ. ಬ್ರಾಹ್ಮಣಶಾಹಿಗಳು, ಚಡ್ಡಿಗಳು, ಫ್ಯಾಸಿಸ್ಟರು ಹೀಗೆ ಹಲವಾರು ಉಪಮೇಯಗಳು ಕಳೆದ ೮೦ ವರ್ಷಗಳಲ್ಲಿ ಆರೆಸ್ಸೆಸ್‌ಗೆ ಅನ್ವರ್ಥವಾಗಿ ಹುಟ್ಟಿಕೊಂಡರು ದೇಶಭಕ್ತರು ಎಂಬ ಪಟ್ಟವನ್ನು ಸಂಘ ಯಾರಿಗೂ ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ ಕೊಟ್ಟರು ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ ಪರದೇಶ ವಿರೋಧಿ ಭಾರತ ಪ್ರೇಮ ಆಳವಾಗಿ ಬೇರುಬಿಟ್ಟಿದೆ.
ಇವತ್ತಿಗೆ ಆರೆಸ್ಸೆಸ್ ಕುರಿತು ಏಕಮುಖವಾದ ವಿರೋಧದ ಅಥವಾ ಕುರುಡು ಅಭಿಮಾನದ ಸಾಹಿತ್ಯಗಳು ಲಭ್ಯವಾಗುತ್ತವೆಯೇ ಹೊರತು ಆರೆಸ್ಸೆಸ್‌ನ ಸಂಘಟನೆಯ ಆಳ, ಅದು ಬೆಳೆಯುತ್ತಿರುವ ವೇಗದ ಕುರಿತು ಗಂಭೀರ ಬರಹಗಳು ವಿರಳ. ಕೋಮುವಾದಕ್ಕೆ ಪರ್ಯಾಯವಾಗಬೇಕಿದ್ದ ಜಾತ್ಯಾತೀತವಾದ ಜನರಿಗೆ ಒಂದು ಕೋಮಿನ ಪರವಾದ ನಿಲುವು ಎಂಬತೆ ಕಾಣುತ್ತಿರುವುದಕ್ಕೆ ಇದು ಕಾರಣವಿರಬಹುದು.
೧೯೨೦ರ ಸುಮಾರಿಗೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರದ ಸಿದ್ಧಾಂತ ಭಾರತದ ರಾಜಕೀಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿರಲಿಲ್ಲ. ಹಿಂದುತ್ವದ ಪ್ರತಿಪಾದನೆಗಾಗಿ ೧೯೨೫ರಲ್ಲಿ ಕೇಶವ ಬಲಿರಾಮ್ ಹೆಡ್ಗೆವಾರ್ ಎಂಬ ವ್ಯಕ್ತಿ ಆರೆಸ್ಸೆ…
ನೆರೆಯ ನಾಡು ಕಂಡು ಬಂದು ತುಂಬಾ ದಿನಗಳ ನಂತರ.....

ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀಖು. ನನ್ನ ಬಳಿಯೂ ನಿರ್ದಿಷ್ಟ ಯೋಜನೆಗಳೇನು ಇರಲಿಲ್ಲ. ನೆರೆ ಸುದ್ದಿಗಳನ್ನು ಟಿವಿ, ಪತ್ರಿಕೆಗಳಲ್ಲಿ ಓದಿದ್ದೆ. ಹಾಗಾಗಿ ಮರು ಯೋಚನೆ ಮಾಡದೆ ಇದ್ದ ಚಿಲ್ಲರೆ ದುಡ್ಡನ್ನು ಎತ್ತಿಕೊಂಡು ಹೊರಟು ನಿಂತಿದ್ದೆ.

ಮುಂದಿನ ೧೦ದಿನ, ೯ ರಾತ್ರಿ ಸರಿ ಸುಮಾರು ೨೫೦ ಗಂಟೆಗಳನ್ನು ನೆರೆ ಆವೃತ ಪ್ರದೇಶಗಳಲ್ಲಿ ಓಡಾಡಿ ಮತ್ತೆ ಗೂಡು ಸೇರಿಕೊಂಡೆ. ಎದುರಿಗೆ ನಾವು ಚಿತ್ರೀಕರಿಸಿಕೊಂಡ ವಿಡಿಯೋ ಟೇಪುಗಳು ಹಾಗೂ ಸಾವಿರಕ್ಕೂ ಅಧಿಕ ಫೋಟೊಗಳಿದ್ದವು. ಅವತ್ತೇ ಬ್ಲಾಗಿಗೆ ಬರೆದು ಬಿಡಬೇಕು ಅಂದುಕೊಂಡೆ. ಆದರೆ ಅಷ್ಟರಲ್ಲೇ ರಾಜ್ಯದ ರಾಜಕಾರಣದಲ್ಲಿ ಬಂಡಾಯದ ಬಿಸಿ ಆರಂಭವಾಯಿತು. ಯಡ್ಡಿ-ರೆಡ್ಡಿ ಬಣಗಳ ನಡುವಿನ ಕದನದಲ್ಲಿ ನೆರೆ ತೆರೆ-ಮರೆಗೆ ಸರಿದಂತಾಗಿತ್ತು. ಕೊನೆಗೆ ಕೆಲವು ಗೆಳೆಯರ ಅಪೇಕ್ಷೆ ಮೇರೆಗೆ ನೆರೆ ಹಾಗೂ ನಮ್ಮ ಸೀಮಿತ ಅನುಭವಗಳನ್ನು ಇಟ್ಟುಕೊಂಡು ಒಂದು ಸಾಕ್ಷ್ಯ ಚಿತ್ರವನ್ನು ಮಾಡುವ ಸಾಹಸಕ್ಕೆ ಇಳಿದುಬಿಟ್ಟೆವು. ಅಲ್ಲಿಗೆ ಬ್ಲಾಗ್ ಮತ್ತೆ ಮರೆತೇ ಹೊದಂತಾಗಿತ್ತು. ಸಧ್ಯ ಡಾಕ್ಯುಮೆಂಟರಿಗಾಗಿ ಸ್ಕ್ರಿಪ್ಟ್ ಕೆಲಸ ಮುಗಿಸಿ ಮತ್ತೆ ಬ್ಲಾಗ್ ಅಂಗಳದಲ್ಲಿ ಬಂದು ನಿಂತಿದ್ದೇನೆ.
ಆದರೆ ನೆರೆಯ…
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ!

ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು.

ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು.ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದುಳ…
ದೇವೆಂದ್ರ ಎಂಬ ಹಸನ್ಮುಖಿ….!

ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ.


ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದಲ್…
ಮಂಗಳೂರು ಡೈರಿ ಕೊನೆಯ ಭಾಗ

ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...!

ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ. ಇದು ಸರಕಾರಿ ಕಡತಗಳಲ್ಲಿ ಅಧಿಕೃತತೆ ಹೊಂದಿರಬಹುದೇನೋ, ಆದರೆ ಜನ ಸಂಸ್ಕೃತಿ ಭಾಷೆಗಳಲ್ಲಿ ತಮ್ಮದೆ ಹೆಸರಗಳನ್ನು ಮಂಗಳೂರಿಗೆ ನೀಡಿದ್ದಾರೆ. ತುಳು ಭಾಷಿಕರು ಇದನ್ನು ‘ಕುಡ್ಲ’ ಎನ್ನುತ್ತಾರೆ. ಬ್ಯಾರಿ ಮಾತನಾಡುವವರಿಗೆ ಇದು ‘ಮೈಕಳ’ವಾಗಿದೆ. ಹತ್ತಿರದ ಕೇರಳಿಗರ ಮಲೆಯಾಳಂನಲ್ಲಿ ಇದು ‘ಮಂಗಳಾಪುರ’.


ಪುಸ್ತಕ ಪ್ರೀತಿ, ಅಕ್ಷರ ಪ್ರೀತಿಗಳು ಇಲ್ಲಿ ಹೆಚ್ಚು ಕಾಣಸಿಗುತ್ತವೆ. ಜೀವನಾನುಭವವನ್ನು ಕತೆಯಾಗಿಸಿದ ಅದ್ಭುತ ಕತೆಗಾರರು ದಕ್ಷಿಣ ಕನ್ನಡದಿಂದ ಮೂಡಿ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಕಂಡಿದ್ದು ಮಂಗಳೂರಿನ ಬದಲಾದ ಪರಿಸ್ಥಿತಿ. ಸೃಜನಶೀಲತೆಗಿಂತ ಇಲ್ಲಿ ಧಾರ್ಮಿಕ ಕಟ್ಟಳೆಗಳು ಬಹುಮುಖ್ಯವಾಗಿ ಕಾಡುತ್ತವೆ. ಇವತ್ತು ಧರ್ಮ ಐಡೆಂಟಿಟಿ ನೀಡುತ್ತಿದೆ. ಹಿಂದುತ್ವ ಪ್ರಬಲವಾಗುತ್ತಿರುವ ಜೊತೆಯಲ್ಲೇ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ತಮ್ಮ ಧಾರ್ಮಿಕ ಐಡೆಂಟಿಟಿಗಾಗಿ ಸೆಣಸಾಡುತ್ತಿದ್ದಾರೆ.
ಇಲ್ಲಿನ ಮತ್ತೊಂದು ವಿಶೇಷ ಸಂಜೆ ಪತ್ರಿಕೆಗಳದ್ದು. ಮುಖ ಪುಟದ ತುಂಬಾ ಭೀಕರ ಚಿತ್ರಗಳನ್ನು ಹೊತ್ತು ಬರುವ ಸಂಜೆ ಪತ್ರಿಕೆಗಳು ಮದ್ಯಾನಕ…
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ!
“ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ”
-ಸಿಡ್ನಿ ಜೆ ಹ್ಯಾರಿಸ್.ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ.
ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ.

ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಕೇವಲ ವ್ಯವಸ್ಥೆಯನ್ನು ಬಯ್ಯುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಆದರೆ ವ್…