ವಿಷಯಕ್ಕೆ ಹೋಗಿ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ!
“ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ”
-ಸಿಡ್ನಿ ಜೆ ಹ್ಯಾರಿಸ್.



ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ.
ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ.

ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಕೇವಲ ವ್ಯವಸ್ಥೆಯನ್ನು ಬಯ್ಯುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಆದರೆ ವ್ಯವಸ್ಥೆಯ ಕೊರತೆಗಳನ್ನು ಸ್ವಸಾಮರ್ಥ್ಯದ ಮೂಲಕ ನೀಗಿಸುವ ಪ್ರಯತ್ನವನ್ನು ಕೆಲವರು ಕೈಗೆತ್ತಿಕೊಳ್ಳುತ್ತಾರೆ. ಇಂತವರು ಇತರರಿಗೂ ಮಾದರಿಯಾಗುತ್ತಾರೆ.

ಇದಕ್ಕೆ ಮತ್ತೊಂದು ಸೇರ್ಪಡೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟಹಳ್ಳಿಯ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕರು. ‘ಹೆಮ್ಮರ’ ಎಂಬ ಕೈಬರಹದ ಪತ್ರಿಕೆಯನ್ನು ಆರಂಭಿಸುವ ಮೂಲಕ ಮಕ್ಕಳಲ್ಲಿ ಹುದುಗಿರುವ ಕ್ರೀಯಾಶೀಲತೆಯನ್ನು ಹೊರಗೆಳೆಯುವ ದಾರಿಯನ್ನು ಇಲ್ಲಿ ಕಂಡುಕೊಳ್ಳಲಾಗಿದೆ. ವಿಶೇಷವೆಂದರೆ ಹಿಂದುಳಿದ ಪ್ರದೇಶವಾಗಿರು ಹೆಮ್ಮರಗಾಲದ ಸುತ್ತ-ಮತ್ತಲಿನ ಪ್ರದೇಶಗಳ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಸ್ವಂತ ಖರ್ಚಿನಲ್ಲಿ ಪತ್ರಿಕೆ ಹೊರತರುತ್ತಿರು ಇಲ್ಲಿನ ಶಿಕ್ಷಕರ ಬದ್ಧತೆ. ‘ನೀನಾಸಂ’ನ ಗರಡಿಯಲ್ಲಿ ಪಳಗಿರುವ ಸಂತೋಷ್ ಗುಡ್ಡಿಯಂಗಡಿ ಎಂಬ ಉತ್ಸಾಹಿ ಶಿಕ್ಷಕರ ಕನಸಿನ ರೂಪ ಈ ಪತ್ರಿಕೆ ಎಂದು ಶಾಲೆಯ ಮುಖ್ಯೋಪದ್ಯಾಯರಾದ ಬಿ.ಎಂ. ಬಸವಣ್ಣ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಹೆಮ್ಮರ’ ತಿಂಗಳಿಗೊಮ್ಮೆ ಹೊರಬರುತ್ತದೆ. ಇದರಲ್ಲಿ ಶಾಲೆ ಮಕ್ಕಳು ಮಾತ್ರವಲ್ಲ ಶಿಕ್ಷಕರು ಕೂಡ ತಮ್ಮ ಅಕ್ಷರ ಪ್ರೀತಿಯನ್ನು ದಾಖಲಿಸುತ್ತಿದ್ದಾರೆ. ‘ಹೆಮ್ಮರ’ದ ಜೊತೆಗೆ ಪ್ರತಿವಾರ ಗೋಡೆ ಪತ್ರಿಕೆಯನ್ನೂ ಪ್ರಕಟಿಸಲಾಗುತ್ತಿದೆ. ಒಂದೊಂದು ತರಗತಿಯ ವಿದ್ಯಾರ್ಥಿಗಳು ಪ್ರತಿವಾರ ಸರದಿಯಂತೆ ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ.

“ ನಮ್ಮ ತರಗತಿಯವರಿಗೆ ಕೊಠಡಿಗಳಿಲ್ಲದೆ ನಾವೆಲ್ಲ ಮರದ ಅಡಿಯಲ್ಲಿ ಕುಳಿತು ಪಾಠವನ್ನು ಕೇಳುವುದು. ಅದರಿಂದ ನಮಗೆ ಅನೇಕ ತೊಂದರೆಗಳು. ಜ್ವರ, ಕೆಮ್ಮು, ನೆಗಡಿ, ಚಳಿಜ್ವರ ಬರುತ್ತಿದೆ. ನಮಗೆ ಸರಿಯಾಗಿ ವ್ಯಾಸಂಗ ಮಾಡಲು ಆಗುತ್ತಿಲ್ಲ. ಮಳೆ ಬಂದರಂತೂ ನಮಗೆ ಒಂದು ನಿರ್ದಿಷ್ಟವಾದ ಸ್ಥಳವೇ ಇರುವುದಿಲ್ಲ”-ಕೆ.ಎಂ. ಚೇತನ, ೮ ‘ಎ’.

ಹೀಗೊಂದು ಬರಹವನ್ನು ಹೆಮ್ಮರದಲ್ಲಿ ಪ್ರಕಟಿಸಲಾಗಿದೆ. ಇವು ನಮ್ಮ ಹಳ್ಳಿಗಾಡಿನಲ್ಲಿರುವ ಸರಕಾರಿ ಶಾಲೆಗಳ ದುಸ್ಥ್ಥಿತಿಯನ್ನು ದಾಖಲಿಸುವ ಅಕ್ಷರಗಳು. ಮುಖ್ಯವಾಹಿನಿಯ ಮಾದ್ಯಮಗಳು ಮಾಡಬೇಕಾದ ಕೆಲಸವನ್ನು ‘ಹೆಮ್ಮರ’ದಂತಹ ಪ್ರಾಯೋಗಿಕ ಪತ್ರಿಕೆಗಳು ಮಾಡುತ್ತಿವೆ ಎನ್ನುವುದೇ ಸಂತೋಷ. ಆದರೆ ಇವರ ಸ್ವಗತ ರಾಜಧಾನಿಗೆ ತಲುಪುವುದಿಲ್ಲ ಎಂಬುದು ವಾಸ್ತವ.
ಪ್ರಾಯೋಗಿಕ ಪತ್ರಿಕೆಯ ಜೊತೆಯಲ್ಲಿ ಮಕ್ಕಳಿಗೆ ನಾಟಕ, ಸಂUತದಂತಹ ಸಾಂಸ್ಕೃತಿಕ ಅಭಿರುಚಿಯ ತರಬೇತಿಯನ್ನೂ ನೀಡಲಾಗುತ್ತಿದೆ. ಒಟ್ಟಿನಲ್ಲಿ ಇಲ್ಲಿನ ಮಕ್ಕಳು ಪ್ರತಿಬಿಂಬವನ್ನು ದಾಖಲಿಸುವ ಕನ್ನಡಿಯಾಗದೆ, ಹೊರ ಪ್ರಪಂಚಕ್ಕೆ ಕೊಂಡಿಯಾಗುವ ಕಿಟಕಿಗಳಾಗಲು ಮಾಡಲು ಪುಟ್ಟ ಪ್ರಯತ್ನ ಹೆಮ್ಮರಗಾಲವೆಂಬ ಪುಟ್ಟ ಹಳ್ಳಿಯಲ್ಲಿ ಸಾಗುತ್ತಿದೆ.

“ಹಳ್ಳಿಯ ಮಕ್ಕಳು ಇತರರಿಗಿಂತಲೂ ಹೆಚ್ಚು ಕ್ರೀಯಾಶೀಲರಾಗಿ ಯೋಚಿಸುತ್ತಾರೆ. ನಾವು ಅವರ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸಿದರೆ ಸಾಕಾಗುತ್ತದೆ. ‘ಹೆಮ್ಮರ’ ಹಾಗೂ ಗೋಡೆ ಪತ್ರಿಕೆಗಳನ್ನು ಪ್ರಾರಂಭಿಸಿದ ನಂತರ ಈ ಹಳ್ಳಿಯ ಮಕ್ಕಳಲ್ಲಿ ಮಹತ್ತರ ಬದಲಾವಣೆಗಳು ಕಾಣುತ್ತಿವೆ. ಮಕ್ಕಳಲ್ಲಿ ಬರೆಯುವ ಹಾಗೂ ಪಠ್ಯೇತರ ಪುಸ್ತಕಗಳನ್ನು ಓದುವ ಮನಸ್ಥಿತಿ ಬೆಳೆಯುತ್ತಿದೆ” ಎನ್ನುತ್ತಾರೆ ಶಿಕ್ಷಕ ಸಂತೋಷ್ ಗುಡ್ಡಿಯಂಗಡಿ

‘ಹೆಮ್ಮರ’ ನೆಟ್ಟು ನೀರೆರೆಯುತ್ತಿರುವ ಸಂತೋಷ್(೯೪೪೯೩೩೧೫೫೧)ರಂತಹ ಉತ್ಸಾಹಿ ಶಿಕ್ಷಕರು ಹಳ್ಳಿಗಾಡಿನಲ್ಲಿ ನಡೆಸುತ್ತಿರುವ ಇಂತಹ ಮೌನ ಕ್ರಾಂತಿಗಳಿಗೆ ಎಲ್ಲರ ಪ್ರೋತ್ಸಾಹ ಮುಖ್ಯ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ
ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ