ವಿಷಯಕ್ಕೆ ಹೋಗಿ
ಮುಂಜಾನೆ ಹೊತ್ತಲ್ಲಿ ಸಂಭವಿಸಿದ ಎರಡು ಆತ್ಮಹತ್ಯೆಗಳ ಕುರಿತು

ಪ್ರಶಾಂತ್ ಹುಲ್ಕೋಡು

ಮೇ.೨೩, ೨೦೦೯ ಹಾಗೂ ಜು.೨೩, ೨೦೦೯. ಈ ಎರಡು ದಿನಗಳ ಮುಂಜಾವು ಆರಂಭಗೊಂಡಿದ್ದು ಆತ್ಮಹತ್ಯೆಗಳ ಮೂಲಕ !
ದಕ್ಷಿಣ ಕೊರಿಯಾದಲ್ಲಿ ಮೇ.೨೩ರಂದು ಮುಂಜಾವು ಆಗಷ್ಟೇ ಬಿಚ್ಚಿಕೊಳ್ಳುತ್ತಿತ್ತು. ದೇಶದ ಮಾಜಿ ಅಧ್ಯಕ್ಷ ರೋ ಮೊ ಯುನ್ ನೋಡಿದ ಕೊನೆಯ ಬೆಳಗಿನ ಜಾವವದು. ಮಿಲಿಯಾಂತರ ಡಾಲರ್‌ಗಳ ಹಗರಣದಲ್ಲಿ ವಿಚಾರಣೆಗೆ ಒಳಗಾಗಿದ್ದರೋ ವಿಪರೀತ ಪಾಪಪ್ರeಯಿಂದ ನರಳುತ್ತಿದ್ದರು. ಅವರಿಗೆ ತಾನು ಆಳಿದ ಜನರ ಎದುರಿಗೆ ಮುಖ ತೋರಿಸುವುದೇ ಅವಮಾನಕರ ಎಂಬ ಭಾವನೆ ಮೂಡಿ ಬಹಳ ದಿನಗಳೇ ಆಗಿದ್ದವು. ಅದೇನನ್ನಿಸಿತೋ ಏನೋ ರೋ ತಮ್ಮ ಆತ್ಮಹತ್ಯೆಗೆ ಅಂತಹದೊಂದು ಮುಂಜಾವನ್ನು ಆಯ್ದುಕೊಂಡರು. ತಮ್ಮ ಮನೆಯ ಹಿಂಬದಿಯ ಬೆಟ್ಟದ ಸಾಲುಗಳ ಮೇಲಿಂದ ಒಂದೇ ನೆಗೆತ. ರೋ ಇತಿಹಾಸವಾಗಿ ಹೋದರು.

ಇಂತಹುದೆ ಒಂದು ಮುಂಜಾವುಗೆ ಬೆಂಗಳೂರು ತೆರೆದುಕೊಂಡಿದ್ದು ಜುಲೈ ೨೩ರಂದು. ಬಿಬಿ‌ಎಂಪಿಯ ಸಹಾಯಕ ಆಯುಕ್ತ ಲಕ್ಷ್ಮಣ್ ಬೆಳಗ್ಗೆ ವಾಕಿಂಗ್ ಎಂದು ಬನಶಂಕರಿಯ ತಮ್ಮ ಮನೆಯಿಂದ ಹೊರಟವರು ಸೀದಾ ತಮ್ಮ ಕಚೇರಿ ತಲುಪಿದರು. ಅದೇನು ಯೋಚಿಸಿದರೊ, ಜನರಿಗೆ ಮುಖ ತೋರಿಸಲು ಹಿಂಸೆಯಾಗುತ್ತಿದೆ ಎಂದು ಪತ್ರಬರೆದಿಟ್ಟ ಲಕ್ಷಣ್ ನೇಣು ಬಿಗಿದುಕೊಂಡರು. ಇವರು ಮಾರ್ಚ್ ೧೮ರಂದು ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಅವರ ಮೇಲೂ ಕೋಟಿ ರೂಪಾಯಿ ಲಂಚದ ಆರೋಪವಿತ್ತು.
ಮೇಲ್ನೋಟಕ್ಕೆ ಈ ಎರಡು ಸಾವುಗಳು ಪ್ರಪಂಚದಲ್ಲಿ ದಿನನಿತ್ಯ ಸಂಭವಿಸುವ ಅಸಂಖ್ಯಾತ ಸಾವುಗಳ ಹಾಗೆ ಕಾಣಿಸಿದರು, ಸಾರ್ವಜನಿಕ ಜೀವನದಲ್ಲಿ ಮಾಡಿದ ತಪ್ಪಿಗಾಗಿ ತಮ್ಮನ್ನು ತಾವು ಶಿಕ್ಷಿಸಿಕೊಂಡ ಅಪರೂಪದ ಘಟನೆಗಳಾಗಿವೆ. ಇಬ್ಬರೂ ಸಾಯುವ ಮುನ್ನ ಪತ್ರ ಬರೆದಿಟ್ಟಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಸಮಾಜದಲ್ಲಿ ಮುಖ ತೋರಿಸಲಾಗದ ಮನಸ್ಥಿತಿ ಇಬ್ಬರಲ್ಲೂ ವ್ಯಕ್ತವಾಗಿದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳಿಲ್ಲದೆ ಬದುಕುತ್ತಿರುವವರನ್ನು ದುರ್ಬೀನು ಹಾಕಿ ಹುಡಕಬೇಕು, ಹಾಗಿದೆ ಇವತ್ತಿನ ಪರಿಸ್ಥಿತಿ. ಇವರಿಬ್ಬರು ತೆಗೆದುಕೊಂಡ ತೀರ್ಮಾನವನ್ನು ಎಲ್ಲಾ ರಾಜಕಾರಣಿಗಳು, ರಾಜಕೀಯ ನಾಯಕರೂ ತೆಗೆದುಕೊಳ್ಳಬೇಕು. ಆದರೆ ಇವರಲ್ಲಿದ್ದ ಮರ್ಯಾದೆ ಅಂಜುವ ಗುಣ ಇಲ್ಲದಿರುವುದರಿಂದ ಪುಣ್ಯ ಅವರೆಲ್ಲ ಬದುಕಿದ್ದಾರೆ ಎನ್ನಿಸುತ್ತದೆ.

೧೦ನೆ ತರಗತಿಯಲ್ಲಿ -ಲಾದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಯೊಬ್ಬ ಸಮಾಜಕ್ಕೆ ಅಂಜಿಯೆ ಈ ನಿರ್ಧಾರಕ್ಕೆ ಬಂದಿರುತ್ತಾನೆ. ಅಂತವರಿಗೆ ಮಾರ್ಯಾದೆ ಕಳೆದುಹೋಯಿತು ಎಂಬುದೆ ಜೀವನಕ್ಕೆ ಕೊನೆಹಾಡಲು ಪ್ರೇರಣೆಯಾಗುತ್ತದೆ.

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋ ಹಾಗೂ ಲಕ್ಷಣ್‌ಗೆ ತಮ್ಮ ಮೇಲಿನ ಆರೊಪಗಳನ್ನು ತಾಂತ್ರಿಕವಾಗಿ ನಿವಾರಿಸಿಕೊಳ್ಳುವ ಅವಕಾಶವನ್ನು ಈ ವ್ಯವಸ್ಥೆ ದಯಪಾಲಿಸುತ್ತಿತ್ತೇನೋ, ಆದರೆ ಕಳೆದು ಹೋದ ಮಾನವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಅರ್ಥವಾಗಿತ್ತು ಎನ್ನಿಸುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆ ಮಾತಿದೆ. ಆದರೆ ಮಾನಕ್ಕೆ ಅಂಜದಿದ್ದರೆ ಮಾತ್ರ ನೈತಿಕತೆ ಕಳೆದುಕೊಂಡೂ ಬದುಕಬಹುದು ಎಂಬುದಕ್ಕೆ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ. ಉದಾಹರಣೆಗೆ ಎಲ್ಲಾ ರಾಜಕೀಯ ಧುರೀಣರು, ಇತ್ಯಾದಿ.

ಹಾಗಾಗಿಯೆ ಇಂತಹ ಸಾವುಗಳು ಮುಖ್ಯವಾಗುತ್ತವೆ. ಮೂರು ಬಿಟ್ಟು ನಿಂತವರ ಎದುರಿಗೆ ಯಾವುದನ್ನೂ ಬಿಡಲಾಗಾದೆ ಹಾಗಂತ ಲೋಭದ ಜೀವನವನ್ನು ತ್ಯಜಿಸದೆ, ವ್ಯಸಸ್ಥೆಯೆ ದಯಪಾಲಿಸಿರುವ ಭ್ರಚ್ಟಾಚಾರದ ಮಾರ್ಗಗಳನ್ನು ಆಯ್ದುಕೊಂಡು ಬದುಕುವ ಲಕ್ಷ್ಮಣ್‌ರಂತವರಿಗೆ ಆತ್ಮಹತ್ಯೆಯಲ್ಲದೆ ಬೇರೆ ದಾರಿ ಇರುವುದಿಲ್ಲ. ಸತ್ತವರ ಕುರಿತು ಕಟುವಾಗಿ ಮಾತನಾಡಬಾರದು ಅಂತಾರೆ. ಆದರೆ ಪ್ರಲೋಭನೆಯ ಬದುಕಿನಲ್ಲಿ ನೈತಿಕತೆಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲವಿರುವವರು ತಮ್ಮ ಚಾರಿತ್ರ್ಯವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಒಂದಲ್ಲಾ ಒಂದು ದಿನ ಇಂತಹ ಸವಾಲುಗಳಗೆ ತಲೆಬಾಗಲೇ ಬೇಕಾಗುತ್ತದೆ. ಎಷ್ಟಾದರೂ ಪುಸ್ತಕದ ಕಾನೂನಿಗಿಂತ ಸಮಾಜದ ಕಾನುನು ದೊಡ್ಡದು. ಅದಕ್ಕೆ ತಲೆಬಾಗುವ ಸ್ಥಿತಿ ನೈತಿಕತೆಯನ್ನು ಕಾಲೆದುಕೊಂಡವರಿಗೆ ಬರಲಿ ಎಂದು ಆಶಿಸುತ್ತ ಇಬ್ಬರ ಸಾವಿಗೆ ಈ ಒಂದು ನಿಮಿಷಗಳ ಮೌನಾಚರಣೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ