ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ಆರೆಸ್ಸೆಸ್ ಕುರಿತು ಒಂದು ಟಿಪ್ಪಣಿ photo:indiawire ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮರ್ಥ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ. ಬ್ರಾಹ್ಮಣಶಾಹಿಗಳು, ಚಡ್ಡಿಗಳು, ಫ್ಯಾಸಿಸ್ಟರು ಹೀಗೆ ಹಲವಾರು ಉಪಮೇಯಗಳು ಕಳೆದ ೮೦ ವರ್ಷಗಳಲ್ಲಿ ಆರೆಸ್ಸೆಸ್‌ಗೆ ಅನ್ವರ್ಥವಾಗಿ ಹುಟ್ಟಿಕೊಂಡರು ದೇಶಭಕ್ತರು ಎಂಬ ಪಟ್ಟವನ್ನು ಸಂಘ ಯಾರಿಗೂ ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ ಕೊಟ್ಟರು ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ ಪರದೇಶ ವಿರೋಧಿ ಭಾರತ ಪ್ರೇಮ ಆಳವಾಗಿ ಬೇರುಬಿಟ್ಟಿದೆ. ಇವತ್ತಿಗೆ ಆರೆಸ್ಸೆಸ್ ಕುರಿತು ಏಕಮುಖವಾದ ವಿರೋಧದ ಅಥವಾ ಕುರುಡು ಅಭಿಮಾನದ ಸಾಹಿತ್ಯಗಳು ಲಭ್ಯವಾಗುತ್ತವೆಯೇ ಹೊರತು ಆರೆಸ್ಸೆಸ್‌ನ ಸಂಘಟನೆಯ ಆಳ, ಅದು ಬೆಳೆಯುತ್ತಿರುವ ವೇಗದ ಕುರಿತು ಗಂಭೀರ ಬರಹಗಳು ವಿರಳ. ಕೋಮುವಾದಕ್ಕೆ ಪರ್ಯಾಯವಾಗಬೇಕಿದ್ದ ಜಾತ್ಯಾತೀತವಾದ ಜನರಿಗೆ ಒಂದು ಕೋಮಿನ ಪರವಾದ ನಿಲುವು ಎಂಬತೆ ಕಾಣುತ್ತಿರುವುದಕ್ಕೆ ಇದು ಕಾರಣವಿರಬಹುದು. ೧೯೨೦ರ ಸುಮಾರಿಗೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರದ ಸಿದ್ಧಾಂತ ಭಾರತದ ರಾಜಕೀಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿರಲಿಲ್ಲ. ಹಿಂದುತ್ವದ ಪ್ರತಿಪಾದನೆಗಾಗಿ ೧೯೨೫ರಲ್ಲಿ ಕೇಶವ ಬಲಿರಾಮ್ ಹೆಡ್ಗೆ...
ನೆರೆಯ ನಾಡು ಕಂಡು ಬಂದು ತುಂಬಾ ದಿನಗಳ ನಂತರ..... ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀಖು. ನನ್ನ ಬಳಿಯೂ ನಿರ್ದಿಷ್ಟ ಯೋಜನೆಗಳೇನು ಇರಲಿಲ್ಲ. ನೆರೆ ಸುದ್ದಿಗಳನ್ನು ಟಿವಿ, ಪತ್ರಿಕೆಗಳಲ್ಲಿ ಓದಿದ್ದೆ. ಹಾಗಾಗಿ ಮರು ಯೋಚನೆ ಮಾಡದೆ ಇದ್ದ ಚಿಲ್ಲರೆ ದುಡ್ಡನ್ನು ಎತ್ತಿಕೊಂಡು ಹೊರಟು ನಿಂತಿದ್ದೆ. ಮುಂದಿನ ೧೦ದಿನ, ೯ ರಾತ್ರಿ ಸರಿ ಸುಮಾರು ೨೫೦ ಗಂಟೆಗಳನ್ನು ನೆರೆ ಆವೃತ ಪ್ರದೇಶಗಳಲ್ಲಿ ಓಡಾಡಿ ಮತ್ತೆ ಗೂಡು ಸೇರಿಕೊಂಡೆ. ಎದುರಿಗೆ ನಾವು ಚಿತ್ರೀಕರಿಸಿಕೊಂಡ ವಿಡಿಯೋ ಟೇಪುಗಳು ಹಾಗೂ ಸಾವಿರಕ್ಕೂ ಅಧಿಕ ಫೋಟೊಗಳಿದ್ದವು. ಅವತ್ತೇ ಬ್ಲಾಗಿಗೆ ಬರೆದು ಬಿಡಬೇಕು ಅಂದುಕೊಂಡೆ. ಆದರೆ ಅಷ್ಟರಲ್ಲೇ ರಾಜ್ಯದ ರಾಜಕಾರಣದಲ್ಲಿ ಬಂಡಾಯದ ಬಿಸಿ ಆರಂಭವಾಯಿತು. ಯಡ್ಡಿ-ರೆಡ್ಡಿ ಬಣಗಳ ನಡುವಿನ ಕದನದಲ್ಲಿ ನೆರೆ ತೆರೆ-ಮರೆಗೆ ಸರಿದಂತಾಗಿತ್ತು. ಕೊನೆಗೆ ಕೆಲವು ಗೆಳೆಯರ ಅಪೇಕ್ಷೆ ಮೇರೆಗೆ ನೆರೆ ಹಾಗೂ ನಮ್ಮ ಸೀಮಿತ ಅನುಭವಗಳನ್ನು ಇಟ್ಟುಕೊಂಡು ಒಂದು ಸಾಕ್ಷ್ಯ ಚಿತ್ರವನ್ನು ಮಾಡುವ ಸಾಹಸಕ್ಕೆ ಇಳಿದುಬಿಟ್ಟೆವು. ಅಲ್ಲಿಗೆ ಬ್ಲಾಗ್ ಮತ್ತೆ ಮರೆತೇ ಹೊದಂತಾಗಿತ್ತು. ಸಧ್ಯ ಡಾಕ್ಯುಮೆಂಟರಿಗಾಗಿ ಸ್ಕ್ರಿಪ್ಟ್ ಕೆಲಸ ಮುಗಿಸಿ ಮತ್ತೆ ಬ್ಲಾಗ್ ಅಂಗಳದಲ್ಲಿ ಬಂದು ನಿಂತಿದ್ದೇನೆ. ಆದರೆ ನೆರ...
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ...
ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ...
ಮಂಗಳೂರು ಡೈರಿ ಕೊನೆಯ ಭಾಗ ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...! ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ. ಇದು ಸರಕಾರಿ ಕಡತಗಳಲ್ಲಿ ಅಧಿಕೃತತೆ ಹೊಂದಿರಬಹುದೇನೋ, ಆದರೆ ಜನ ಸಂಸ್ಕೃತಿ ಭಾಷೆಗಳಲ್ಲಿ ತಮ್ಮದೆ ಹೆಸರಗಳನ್ನು ಮಂಗಳೂರಿಗೆ ನೀಡಿದ್ದಾರೆ. ತುಳು ಭಾಷಿಕರು ಇದನ್ನು ‘ಕುಡ್ಲ’ ಎನ್ನುತ್ತಾರೆ. ಬ್ಯಾರಿ ಮಾತನಾಡುವವರಿಗೆ ಇದು ‘ಮೈಕಳ’ವಾಗಿದೆ. ಹತ್ತಿರದ ಕೇರಳಿಗರ ಮಲೆಯಾಳಂನಲ್ಲಿ ಇದು ‘ಮಂಗಳಾಪುರ’. ಪುಸ್ತಕ ಪ್ರೀತಿ, ಅಕ್ಷರ ಪ್ರೀತಿಗಳು ಇಲ್ಲಿ ಹೆಚ್ಚು ಕಾಣಸಿಗುತ್ತವೆ. ಜೀವನಾನುಭವವನ್ನು ಕತೆಯಾಗಿಸಿದ ಅದ್ಭುತ ಕತೆಗಾರರು ದಕ್ಷಿಣ ಕನ್ನಡದಿಂದ ಮೂಡಿ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಕಂಡಿದ್ದು ಮಂಗಳೂರಿನ ಬದಲಾದ ಪರಿಸ್ಥಿತಿ. ಸೃಜನಶೀಲತೆಗಿಂತ ಇಲ್ಲಿ ಧಾರ್ಮಿಕ ಕಟ್ಟಳೆಗಳು ಬಹುಮುಖ್ಯವಾಗಿ ಕಾಡುತ್ತವೆ. ಇವತ್ತು ಧರ್ಮ ಐಡೆಂಟಿಟಿ ನೀಡುತ್ತಿದೆ. ಹಿಂದುತ್ವ ಪ್ರಬಲವಾಗುತ್ತಿರುವ ಜೊತೆಯಲ್ಲೇ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ತಮ್ಮ ಧಾರ್ಮಿಕ ಐಡೆಂಟಿಟಿಗಾಗಿ ಸೆಣಸಾಡುತ್ತಿದ್ದಾರೆ. ಇಲ್ಲಿನ ಮತ್ತೊಂದು ವಿಶೇಷ ಸಂಜೆ ಪತ್ರಿಕೆಗಳದ್ದು. ಮುಖ ಪುಟದ ತುಂಬಾ ಭೀಕರ ಚಿತ್ರಗಳನ್ನು ಹೊತ್ತು ಬರುವ ಸಂಜೆ ಪತ್ರಿಕೆಗಳು ಮದ್ಯ...
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ...
ನಾಲ್ಕು ಮೂವತ್ತರ ಕಲರವ! ಇದು ಸಂಜೆ ನಾಲ್ಕ ಮೂವತ್ತರ ನಂತರದ ಕಲರವ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಶಾಲೆ ಬಿಡುತ್ತಿದ್ದಂತೆ ಮಕ್ಕಳು ಸಾಲು ಸಾಲಾಗಿ ತಮ್ಮೂರಿಗೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ಒಂದು ಹತ್ತು ವರ್ಷಗಳ ಹಿಂದೆ ನಾನು ಕೂಡ ಸೇವಾ ಭಾರತಿ ಶಾಲೆಯ ಸಮವಸ್ತ್ರದಲ್ಲಿ ನಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಿದ್ದೆ. ತೀರ್ಥಹಳ್ಳಿಯಲ್ಲಿ ಸೋಮವಾರ ಸಂತೆ. ಅವತ್ತು ಮಾತ್ರ ಬಸ್ಸಿನಲ್ಲಿ ಕಾಲು ಹಾಕಲೂ ಜಾಗವಿರುವುದಿಲ್ಲ. ಸಂತೆ ಮಾಡಿ ಬಂದವರ ತರಕಾರಿ, ಒಣಮೀನುಗಳ ವಾಸನೆ ಘಮ ಬಸ್ಸಿನ ತುಂಬಾ ಆವರಿಸಿಕೊಳ್ಳುತ್ತಿತ್ತು. ಇವತ್ತೂ ಕೂಡ ಭಾರದ ಬ್ಯಾಗನ್ನು ಹಾಕಿಕೊಂಡ ಅನಾಮಿಕ ಪುಟಾಣಿಗಳು ಅದೇ ಕಂಪನ್ನು ಸವಿಯುತ್ತಿದ್ದಾರೆ. ಅವತ್ತು ಒಂದು ರೂಪಾಯಿ ಇದ್ದರೆ ಚಾಕೋಲೆಟ್ ತಿನ್ನುತ್ತಿದ್ದಾಗ ಇದ್ದ ಸಮಾಧಾನ ಇವತ್ತು ಕಾಫಿ ಡೇಯಲ್ಲಿ ಕುಳಿತರು ಸಿಗುವುದಿಲ್ಲ. ನಾನಿಲ್ಲಿ ಹೇಳ ಹೊರಟಿದ್ದು ಅಂತಹ ಪುಟ್ಟು ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ತೆರುತ್ತಿರುವ ಬೆಲೆಯ ಕುರಿತು. ತೀರ್ಥಹಳ್ಳಿಯ ಆರ್ಥಿಕ ಪರಿಸ್ಥಿತಿಗೋ ಅಥವಾ ಅಲ್ಲಿನ ಅಡಿಕೆ ಬೆಳೆಗಿರುವ ಬೆಲೆಗೊ ಸಾಮಾನ್ಯರೂ ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಗಲ್ಲಿಗೊಂದರಂತೆ ಪೇಯಿಂಗ್ ಗೆಸ್ಟ್‌ಗಳಿವೆ. ಸ್ವಲ್ಪ ಹಣವಂತರು ತಮ್ಮ ಮಕ್ಕಳನ್ನು ಅಂತಹ ಪೇಯಿಂಗ್ ಗೆಸ್ಟ್‌ಗಳಲ್ಲಿ ಬಿಡುತ್ತಾರೆ. ನಾನು ೮ನೆ ತರಗತಿಯಲ್ಲಿರುವಾಗ ಎರಡೂವರ...
ತಿಗಣೆಗಳ ಜೊತೆ ‘ಲಿವಿಂಗ್ ಟುಗೆದರ್’! ಮನುಷ್ಯ ಯಾವಾಗಲು ಪಕೃತಿ ಸಹಜತೆಯನ್ನು ತನ್ನ ಪರಿಧಿಯೊಳಗೆ ತರಲು ಹೆಣಗುತ್ತಲೇ ಇರುತ್ತಾನೆ. ಆದರೂ ಕೆಲವೊಮ್ಮೆ ಅವನಿಗೆ ಸವಾಲಾಗುವ ಕ್ಷುಲ್ಲಕ ಜೀವಿಗಳು ಅಂಕೆಗೆ ಸಿಗದ ಸವಾಲುಗಳನ್ನು ಒಡ್ಡುತ್ತಿರುತ್ತವೆ. ತೇಜಸ್ವಿಯವರ ಮಿಲೇನಿಯಂ ಸರಣಿಯಲ್ಲಿ ಇಲಿಗಳ ಕತೆಯನ್ನು ಓದಿರಬಹುದು. ಇಲ್ಲಿ ಸಾಮಾನ್ಯ ಮೂಷಿಕ ಸಮುದಾಯವನ್ನು ಕೊಲ್ಲಲು ಪ್ರಪಂಚದಾದ್ಯಂತ ಹಮ್ಮಿಕೊಂಡ ಯೋಜನೆಗಳು ಸ್ವಾರಸ್ಯಕರವಾಗಿ ತೆರೆದುಕೊಳ್ಳುತ್ತವೆ. ಬೇಸಿಗೆಯಲ್ಲಿ ಸೊಳ್ಳೆ ಕಾಟಕ್ಕೆ ಪರದೆಗಳು, ಮ್ಯಾಟ್‌ಗಳು, ಕಾಯಿಲ್‌ಗಳು, ಫ್ಯಾನ್‌ಗಳು ಹಾಗೂ ಸಾಂಬ್ರಾಣಿ ಹೊಗೆಯ ಮೊರೆಹೋಗುವುದು ಸಾಮಾನ್ಯ. ಇದು ಮತ್ತೊಂದು ಕ್ಷುಲ್ಲಕ ಜೀವಿ ನನ್ನ ಜೀವನದಲ್ಲಿ ಸವಾಲಾಗಿ ಕಾಡಿದ ಕತೆ. ತಿಗಣೆಗಳ ವಿಚಾರ ಗೊತ್ತಿರಬಹುದು ಅಥವಾ ಅವುಗಳ ಉಪಟಳಕ್ಕೆ ನೀವೂ ತುತ್ತಾಗಿರಬಹುದು. ನಾನು ಪಿಯುಸಿ ಮುಗಿಸುವವರೆಗೂ ತಿಗಣೆಗಳ ಹೆಸರು ಕೇಳಿದ್ದೆನೇ ಹೊರತು ನೋಡುವ ‘ಭಾಗ್ಯ’ ಲಭಿಸಿರಲಿಲ್ಲ. ಸಿನಿಮಾ ಮಂದಿರಗಳಲ್ಲಿ ತಿಗಣೆಗಳು ಇರುತ್ತವೆ ಎಂದು ಹೇಳುತ್ತಿದ್ದರೂ ನಾನು ಸಿನಿಮಾ ನೋಡಲು ಹೋದಾಗ, ಅಲ್ಲಿನ ಕತ್ತಲಿನ ಕಾರಣಕ್ಕೋ, ಸಿನಿಮಾ ಮೋಡಿಗೋ ತಿಗಣೆಗಳ ವಿಚಾರ ಮರೆತು ಹೋಗಿರುತ್ತಿತ್ತು. ಮಲೆನಾಡಿನಲ್ಲಿ ಹಿಂದೆ ತಿಗಣೆಗಳ ಕಾಟ ತುಂಬಾ ಇರುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದರು. ಅವಾಗೆಲ್ಲ್ಲ ಈಚಲು ಗರಿಯಿಂದ ಮಾಡಿದ ಚಾಪೆಗಳನ್ನು ಬಳಸುತ್ತಿದ್ದರು. ಈ ಚಾಪೆಗಳು ತಿಗಣೆಗಳಿಗೆ ತಮ್ಮ ಜೀ...
ದಲ್ಲಿ ೨೦೦೯. ಜುಲೈ,28ರಲ್ಲಿ ಪ್ರಕಟವಾದ ಲೇಖನ ನಮಗೆ ಈತ ಭಯೋತ್ಪಾದಕ. ಅವರಿಗೆ ಬರೀ ‘ಬಂದೂಕುಧಾರಿ!’ ಪ್ರಶಾಂತ್ ಹುಲ್ಕೋಡು ಮಂಗಳವಾರ, 2009 (06:04 IST) ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗೊತ್ತಲ್ಲ. ಅದೇ ಮುಂಬೈ ದಾಳಿ ಪ್ರಕರಣದಲ್ಲಿ ಸೆರೆ ಸಿಕ್ಕ ಏಕೈಕ ಆರೋಪಿ. ಸಧ್ಯ ಪ್ರಪಂಚದ ಮಾಧ್ಯಮಗಳ ಮುಖ ಪುಟದಲ್ಲಿ ಕಸಬ್ ಜಾಗ ಪಡೆದುಕೊಂಡಿದ್ದಾನೆ. ವಿಶೇಷ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ತನ್ನ ಉಡಾಫೆ- ಹಾಗೂ ವಿಚಿತ್ರ ನಡವಳಿಕೆಗಳಿಂದ ಎಲ್ಲರ ಗಮನ ಸೆಳೆದಿರುವ ಕಸಬ್ ಕುರಿತಾದ ಲೇಟೆಸ್ಟ್ ಸುದ್ಧಿಯೊಂದು ಬಂದಿದೆ. ಏನಪ್ಪ ಅಂದ್ರೆ, ಕಸಬ್ ಹಾಗು ಆತನ ಉಳಿದ ೯ ಜನ ಕಳೆದ ನವೆಂಬರ್‌ನಲ್ಲಿ ಮುಂಬೈ ಎಂಬ ಮಹಾನಗರಿಗೆ ಲಗ್ಗೆ ಇಟ್ಟದ್ದು ನಿಮಗೆ ಗೊತ್ತೇ ಇದೆ. ಈಗ ಅವರ ಕೃತ್ಯವನ್ನು ಏನೆಂದು ಕರೆಯಬೇಕು ಎಂದು ಸುದ್ಧಿ ಮನೆಗಳ ಪದ ಪ್ರಯೋಗಶಾಲೆಯಲ್ಲಿ ಸಾಣೆ ಹಿಡಿಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಕಸಬ್ ವಿಚಾರಣೆಗಳನ್ನು ವರದಿ ಮಾಡುತ್ತಿರುವ ಅಮೆರಿಕಾದ ಬಹುತೇಕ ಮಾಧ್ಯಮಗಳು ಕಸಬ್‌ನನ್ನು ಭಯೋತ್ಪಾದಕ ಎಂದು ಕರೆಯುತ್ತಿಲ್ಲ. ನ್ಯೂಯಾರ್ಕ್ ಟೈಮ್ಸ್‌ನಿಂದ ಹಿಡಿದು ವಾಲ್ ಸ್ಟ್ರೀಟ್ ಜರ್ನಲ್‌ವರೆಗೆ ಕಸಬ್ ಗನ್ ಮ್ಯಾನ್ ಅಷ್ಟೆ. ಅಮೆರಿಕಾದ ಪತ್ರಿಕೆಗಳ ಈ ಪದ ಪ್ರಯೋಗ ಸುದ್ಧಿ ಪತ್ರಿಕೆಗಳಲ್ಲಿ ಭಾಷೆ ಬಳಕೆಯ ಕುರಿತಾದ ಹೊಸ ಚರ್ಚೆಗೆ ಕಾರಣವಾಗಿದೆ. ಕಸಬ್ ನ್ಯಾಯಾಲಯದಲ್ಲಿ ಇದ್ದಕ್ಕಿದ್ದ ಹಾಗೆ ‘ನಾನು ತಪ್ಪು ಮಾಡಿದ್ದೇನೆ, ನನ್ನನ್ನು ಗಲ್ಲಿಗೇರಿಸಿ’ ಎಂದು...
ಮಂಗಳೂರು ಡೈರಿ. ಭಾಗ-೩ ತೇಜಸ್ವಿ ಜೊತೆ ನಡೆಯದ ಸಂವಾದ ಪಿಯುಸಿಯ ದಿನಗಳು. ಬಹುಷ ೨೦೦೨ ಇರಬೇಕು. ಅವತ್ತಿಗಾಗಲೇ ಗುಜರಾತ್ ನರಮೇಧ ನಡೆದುಹೊಗಿತ್ತು. ಕರ್ನಾಟಕದ ಬಹುತೇಕ ಬುದ್ದಿಜೀವಿಗಳು ಬಾಬಾಬುಡನ್ ಗಿರಿ ವಿವಾದದಲ್ಲಿ ಸಂಘಪರಿವಾರದ ನಿಲುವನ್ನು ಪ್ರತಿಭಟಿಸಿ ಸುದ್ಧಿಯಲ್ಲಿದ್ದರು. ಆಗಷ್ಟೆ ಹೋರಾಟವೆಂಬ ವಿಸ್ಮಯಕಾರಿ ಜಗತ್ತಿಗೆ ನಾನು ಕಾಲಿಡುತ್ತಿದ್ದ ದಿನಗಳು. ತೀರ್ಥಹಳ್ಳಿಯಲ್ಲಿ ಪಿಯುಸಿಗೆ ಸೇರಿದ್ದೆ. ಮನೆಯಲ್ಲಿ ಸೈನ್ಸ್ ಕೊಡಿಸಿದ್ದರು. ಮಗ ಮುಂದೆ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿ ಎಂಬ ದೂರದ ನಿರೀಕ್ಷೆ ಅಪ್ಪ, ಅಮ್ಮಂಗೆ ಇತ್ತು. ಆದರೆ ನನಗೆ ಪತ್ರಿಕೋದ್ಯಮ ಹುಚ್ಚು ಅಂಟಿಕೊಂಡಿತು. ಅಲ್ಲಿನ ಸ್ಥಳೀಯ ಪತ್ರಿಕೆ ವಿನೂತನ ಮಾತುಕತೆಯಲ್ಲಿ ಸಂಬಳವಿಲ್ಲದ ಕೆಲಸಕ್ಕೆ ಸೇರಿದ್ದೆ. ಆಗ ಇದ್ದದ್ದು ನಾನು ಬರೆಯಬೇಕು, ಹೆಸರು ಮಾಡಬೇಕು ಎಂಬ ಕಲ್ಪನೆಗಳು ಅಷ್ಟೆ. ಆದರೆ ಹೆಚ್ಚು ಕಡಿಮೆ ಅವತ್ತು ನನಗೆ ಗಾಡ್ ಫಾದರ್ ರೂಪದಲ್ಲಿದ್ದ ನೆಂಪೆ ದೇವರಾಜ್ ತೀರ್ಥಹಳ್ಳಿಯಲ್ಲಿ ಸಾಮಾಜಿಕ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಅವರಿಂದಲೇ ನನಗೆ ಬಾಬಾಬುಡನ್ ಗಿರಿ ವಿವಾದದ ಪರಿಚಯವಾಗಿತ್ತು. ಸಂಘಪರಿವಾರದ ಶಾಲೆಯಲ್ಲಿ ಓದಿ ಬೆಳೆದಿದ್ದರೂ, ಅವತ್ತಿಗಾಗಲೇ ಕುವೆಂಪು, ತೇಜಸ್ವಿ ಬರಹಗಳಿಂದ ಆರೆಸ್ಸೆಸ್‌ನ ಹುಸಿ ದೇಶ ಪ್ರೇಮ ಮೈಬಿಟ್ಟು ಹೋಗಿತ್ತು. ಚಿಕ್ಕಮಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆಯ ಎರಡನೆ ವರ್ಷದ ಕಾರ್ಯಕ್ರಮ. ತೀರ್ಥಹಳ್ಳಿಯ ಸಹೃದಯರು, ಕೆಲವು ಹಳೆಯ ತಲೆಮಾ...
ಮಂಗಳೂರು ಡೈರಿ. ಭಾಗ-೨ ಸಕತ್ ಹಾಟ್ ಮಗಾ..! ಸಧ್ಯ ಮಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಜಡಿ ಮಳೆ ಗುಡಿಸಿಹಾಕುತ್ತಿತ್ತು. ಈಗ ಮಳೆ ಸ್ವಲ್ಪ ಕಡಿಮೆಯಾದ ಕಾರಣಕ್ಕೇನೋ ಬಿಸಿಲಿನ ತಾಪ ಹೆಚ್ಚುತ್ತಿರುವುದು ಬೆನ್ನಲ್ಲಿ ಮೂಡುತ್ತಿರುವ ಬೆವರಿನ ಸಾಲುಗಳು ತಿಳಿಸುತ್ತಿವೆ. ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ಸ್ಥಳೀಯರು, ‘ನೀವು ಬೇಸಿಗೆಯಲ್ಲಿ ಇಲ್ಲಿರಬೇಕು. ಆಗ ಬಿಸಿಲು ಎಂದರೆ ಏನು ಎಂದು ಗೊತ್ತಾಗುತ್ತದೆ’ ಎಂದು ಬೆದರಿಸುತ್ತಿದ್ದಾರೆ. ನಾನು ಕೆಲಸ ಮಾಡುವ ಪತ್ರಿಕಾ ಕಚೇರಿ ಮಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವುದರಿಂದ ಇಲ್ಲಿ ದಿನನಿತ್ಯ ಬಿಸಿಲಲ್ಲಿ ದುಡಿಯುವ ಕಾರ್ಮಿಕರ ಸಮೂಹವೇ ಕಾಣುತ್ತದೆ. ಮಾಸಲು ಬಟ್ಟೆಯ, ಸಾಧಾರಣ ಉಡುಗೆಯ ಸ್ವಲ್ಪ ಕಂದು ಬಣ್ಣದ ವ್ಯಕ್ತಿತ್ವಗಳು. ನಾನಾದರೂ ಆಫೀಸಿನ -ನಿನ ಕೆಳಗೆ ಕುಳಿತು ಕೆಲಸ ಮಾಡುವುದು, ಇವರಂತೆ ಬಿಸಿಲಿನಲ್ಲಿ ದುಡಿಯುತ್ತಿಲ್ಲವಲ್ಲ ಎಂಬ ಸಮಾದಾನವನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಮಂಗಳೂರೆಂದರೆ ಘಟ್ಟದ ಕೆಳಗಿನ ಊರು, ಸಮುದ್ರ ಅಂತೆಲ್ಲ ಕಲ್ಪನೆಗಳಿದ್ದವು ಅಷ್ಟೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದುವಾಗ ಘಟ್ಟದ ಕೆಳಗಿನ ಕೂಲಿಯಾಳುಗಳ ಚಿತ್ರಣ ಬರುತ್ತದೆ. ಆದರೆ ಇವತ್ತು ಮಂಗಳೂರು ಎಂದರೆ ದುಬೈ ದುಡ್ಡಿನಿಂದ ಶ್ರ್ರೀಮಂತವಾದ ಪ್ರದೇಶ ಎಂದು ಸ್ನೇಹಿತರು ಹೇಳುತ್ತಾರೆ. ಆದರೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದಿನನಿತ್ಯ ಕಾಣುವ ...
ಮುಂಜಾನೆ ಹೊತ್ತಲ್ಲಿ ಸಂಭವಿಸಿದ ಎರಡು ಆತ್ಮಹತ್ಯೆಗಳ ಕುರಿತು ಪ್ರಶಾಂತ್ ಹುಲ್ಕೋಡು ಮೇ.೨೩, ೨೦೦೯ ಹಾಗೂ ಜು.೨೩, ೨೦೦೯. ಈ ಎರಡು ದಿನಗಳ ಮುಂಜಾವು ಆರಂಭಗೊಂಡಿದ್ದು ಆತ್ಮಹತ್ಯೆಗಳ ಮೂಲಕ ! ದಕ್ಷಿಣ ಕೊರಿಯಾದಲ್ಲಿ ಮೇ.೨೩ರಂದು ಮುಂಜಾವು ಆಗಷ್ಟೇ ಬಿಚ್ಚಿಕೊಳ್ಳುತ್ತಿತ್ತು. ದೇಶದ ಮಾಜಿ ಅಧ್ಯಕ್ಷ ರೋ ಮೊ ಯುನ್ ನೋಡಿದ ಕೊನೆಯ ಬೆಳಗಿನ ಜಾವವದು. ಮಿಲಿಯಾಂತರ ಡಾಲರ್‌ಗಳ ಹಗರಣದಲ್ಲಿ ವಿಚಾರಣೆಗೆ ಒಳಗಾಗಿದ್ದರೋ ವಿಪರೀತ ಪಾಪಪ್ರeಯಿಂದ ನರಳುತ್ತಿದ್ದರು. ಅವರಿಗೆ ತಾನು ಆಳಿದ ಜನರ ಎದುರಿಗೆ ಮುಖ ತೋರಿಸುವುದೇ ಅವಮಾನಕರ ಎಂಬ ಭಾವನೆ ಮೂಡಿ ಬಹಳ ದಿನಗಳೇ ಆಗಿದ್ದವು. ಅದೇನನ್ನಿಸಿತೋ ಏನೋ ರೋ ತಮ್ಮ ಆತ್ಮಹತ್ಯೆಗೆ ಅಂತಹದೊಂದು ಮುಂಜಾವನ್ನು ಆಯ್ದುಕೊಂಡರು. ತಮ್ಮ ಮನೆಯ ಹಿಂಬದಿಯ ಬೆಟ್ಟದ ಸಾಲುಗಳ ಮೇಲಿಂದ ಒಂದೇ ನೆಗೆತ. ರೋ ಇತಿಹಾಸವಾಗಿ ಹೋದರು. ಇಂತಹುದೆ ಒಂದು ಮುಂಜಾವುಗೆ ಬೆಂಗಳೂರು ತೆರೆದುಕೊಂಡಿದ್ದು ಜುಲೈ ೨೩ರಂದು. ಬಿಬಿ‌ಎಂಪಿಯ ಸಹಾಯಕ ಆಯುಕ್ತ ಲಕ್ಷ್ಮಣ್ ಬೆಳಗ್ಗೆ ವಾಕಿಂಗ್ ಎಂದು ಬನಶಂಕರಿಯ ತಮ್ಮ ಮನೆಯಿಂದ ಹೊರಟವರು ಸೀದಾ ತಮ್ಮ ಕಚೇರಿ ತಲುಪಿದರು. ಅದೇನು ಯೋಚಿಸಿದರೊ, ಜನರಿಗೆ ಮುಖ ತೋರಿಸಲು ಹಿಂಸೆಯಾಗುತ್ತಿದೆ ಎಂದು ಪತ್ರಬರೆದಿಟ್ಟ ಲಕ್ಷಣ್ ನೇಣು ಬಿಗಿದುಕೊಂಡರು. ಇವರು ಮಾರ್ಚ್ ೧೮ರಂದು ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಅವರ ಮೇಲೂ ಕೋಟಿ ರೂಪಾಯಿ ಲಂಚದ ಆರೋಪವಿತ್ತು. ಮೇಲ್ನೋಟಕ್ಕೆ ಈ ಎರಡು ಸಾವುಗಳು ಪ್ರಪಂಚದಲ್ಲಿ ದಿನನಿತ್ಯ ಸಂಭವಿಸು...
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...
ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...