ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಂಗಳೂರು ಡೈರಿ ಕೊನೆಯ ಭಾಗ ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...! ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭಾಷೆಯ ಹೆಸರು ಮಾತ್ರ. ಇದು ಸರಕಾರಿ ಕಡತಗಳಲ್ಲಿ ಅಧಿಕೃತತೆ ಹೊಂದಿರಬಹುದೇನೋ, ಆದರೆ ಜನ ಸಂಸ್ಕೃತಿ ಭಾಷೆಗಳಲ್ಲಿ ತಮ್ಮದೆ ಹೆಸರಗಳನ್ನು ಮಂಗಳೂರಿಗೆ ನೀಡಿದ್ದಾರೆ. ತುಳು ಭಾಷಿಕರು ಇದನ್ನು ‘ಕುಡ್ಲ’ ಎನ್ನುತ್ತಾರೆ. ಬ್ಯಾರಿ ಮಾತನಾಡುವವರಿಗೆ ಇದು ‘ಮೈಕಳ’ವಾಗಿದೆ. ಹತ್ತಿರದ ಕೇರಳಿಗರ ಮಲೆಯಾಳಂನಲ್ಲಿ ಇದು ‘ಮಂಗಳಾಪುರ’. ಪುಸ್ತಕ ಪ್ರೀತಿ, ಅಕ್ಷರ ಪ್ರೀತಿಗಳು ಇಲ್ಲಿ ಹೆಚ್ಚು ಕಾಣಸಿಗುತ್ತವೆ. ಜೀವನಾನುಭವವನ್ನು ಕತೆಯಾಗಿಸಿದ ಅದ್ಭುತ ಕತೆಗಾರರು ದಕ್ಷಿಣ ಕನ್ನಡದಿಂದ ಮೂಡಿ ಬಂದಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಕಂಡಿದ್ದು ಮಂಗಳೂರಿನ ಬದಲಾದ ಪರಿಸ್ಥಿತಿ. ಸೃಜನಶೀಲತೆಗಿಂತ ಇಲ್ಲಿ ಧಾರ್ಮಿಕ ಕಟ್ಟಳೆಗಳು ಬಹುಮುಖ್ಯವಾಗಿ ಕಾಡುತ್ತವೆ. ಇವತ್ತು ಧರ್ಮ ಐಡೆಂಟಿಟಿ ನೀಡುತ್ತಿದೆ. ಹಿಂದುತ್ವ ಪ್ರಬಲವಾಗುತ್ತಿರುವ ಜೊತೆಯಲ್ಲೇ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ತಮ್ಮ ಧಾರ್ಮಿಕ ಐಡೆಂಟಿಟಿಗಾಗಿ ಸೆಣಸಾಡುತ್ತಿದ್ದಾರೆ. ಇಲ್ಲಿನ ಮತ್ತೊಂದು ವಿಶೇಷ ಸಂಜೆ ಪತ್ರಿಕೆಗಳದ್ದು. ಮುಖ ಪುಟದ ತುಂಬಾ ಭೀಕರ ಚಿತ್ರಗಳನ್ನು ಹೊತ್ತು ಬರುವ ಸಂಜೆ ಪತ್ರಿಕೆಗಳು ಮದ್ಯ...
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ...
ನಾಲ್ಕು ಮೂವತ್ತರ ಕಲರವ! ಇದು ಸಂಜೆ ನಾಲ್ಕ ಮೂವತ್ತರ ನಂತರದ ಕಲರವ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಶಾಲೆ ಬಿಡುತ್ತಿದ್ದಂತೆ ಮಕ್ಕಳು ಸಾಲು ಸಾಲಾಗಿ ತಮ್ಮೂರಿಗೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ಒಂದು ಹತ್ತು ವರ್ಷಗಳ ಹಿಂದೆ ನಾನು ಕೂಡ ಸೇವಾ ಭಾರತಿ ಶಾಲೆಯ ಸಮವಸ್ತ್ರದಲ್ಲಿ ನಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಿದ್ದೆ. ತೀರ್ಥಹಳ್ಳಿಯಲ್ಲಿ ಸೋಮವಾರ ಸಂತೆ. ಅವತ್ತು ಮಾತ್ರ ಬಸ್ಸಿನಲ್ಲಿ ಕಾಲು ಹಾಕಲೂ ಜಾಗವಿರುವುದಿಲ್ಲ. ಸಂತೆ ಮಾಡಿ ಬಂದವರ ತರಕಾರಿ, ಒಣಮೀನುಗಳ ವಾಸನೆ ಘಮ ಬಸ್ಸಿನ ತುಂಬಾ ಆವರಿಸಿಕೊಳ್ಳುತ್ತಿತ್ತು. ಇವತ್ತೂ ಕೂಡ ಭಾರದ ಬ್ಯಾಗನ್ನು ಹಾಕಿಕೊಂಡ ಅನಾಮಿಕ ಪುಟಾಣಿಗಳು ಅದೇ ಕಂಪನ್ನು ಸವಿಯುತ್ತಿದ್ದಾರೆ. ಅವತ್ತು ಒಂದು ರೂಪಾಯಿ ಇದ್ದರೆ ಚಾಕೋಲೆಟ್ ತಿನ್ನುತ್ತಿದ್ದಾಗ ಇದ್ದ ಸಮಾಧಾನ ಇವತ್ತು ಕಾಫಿ ಡೇಯಲ್ಲಿ ಕುಳಿತರು ಸಿಗುವುದಿಲ್ಲ. ನಾನಿಲ್ಲಿ ಹೇಳ ಹೊರಟಿದ್ದು ಅಂತಹ ಪುಟ್ಟು ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ತೆರುತ್ತಿರುವ ಬೆಲೆಯ ಕುರಿತು. ತೀರ್ಥಹಳ್ಳಿಯ ಆರ್ಥಿಕ ಪರಿಸ್ಥಿತಿಗೋ ಅಥವಾ ಅಲ್ಲಿನ ಅಡಿಕೆ ಬೆಳೆಗಿರುವ ಬೆಲೆಗೊ ಸಾಮಾನ್ಯರೂ ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಗಲ್ಲಿಗೊಂದರಂತೆ ಪೇಯಿಂಗ್ ಗೆಸ್ಟ್‌ಗಳಿವೆ. ಸ್ವಲ್ಪ ಹಣವಂತರು ತಮ್ಮ ಮಕ್ಕಳನ್ನು ಅಂತಹ ಪೇಯಿಂಗ್ ಗೆಸ್ಟ್‌ಗಳಲ್ಲಿ ಬಿಡುತ್ತಾರೆ. ನಾನು ೮ನೆ ತರಗತಿಯಲ್ಲಿರುವಾಗ ಎರಡೂವರ...
ತಿಗಣೆಗಳ ಜೊತೆ ‘ಲಿವಿಂಗ್ ಟುಗೆದರ್’! ಮನುಷ್ಯ ಯಾವಾಗಲು ಪಕೃತಿ ಸಹಜತೆಯನ್ನು ತನ್ನ ಪರಿಧಿಯೊಳಗೆ ತರಲು ಹೆಣಗುತ್ತಲೇ ಇರುತ್ತಾನೆ. ಆದರೂ ಕೆಲವೊಮ್ಮೆ ಅವನಿಗೆ ಸವಾಲಾಗುವ ಕ್ಷುಲ್ಲಕ ಜೀವಿಗಳು ಅಂಕೆಗೆ ಸಿಗದ ಸವಾಲುಗಳನ್ನು ಒಡ್ಡುತ್ತಿರುತ್ತವೆ. ತೇಜಸ್ವಿಯವರ ಮಿಲೇನಿಯಂ ಸರಣಿಯಲ್ಲಿ ಇಲಿಗಳ ಕತೆಯನ್ನು ಓದಿರಬಹುದು. ಇಲ್ಲಿ ಸಾಮಾನ್ಯ ಮೂಷಿಕ ಸಮುದಾಯವನ್ನು ಕೊಲ್ಲಲು ಪ್ರಪಂಚದಾದ್ಯಂತ ಹಮ್ಮಿಕೊಂಡ ಯೋಜನೆಗಳು ಸ್ವಾರಸ್ಯಕರವಾಗಿ ತೆರೆದುಕೊಳ್ಳುತ್ತವೆ. ಬೇಸಿಗೆಯಲ್ಲಿ ಸೊಳ್ಳೆ ಕಾಟಕ್ಕೆ ಪರದೆಗಳು, ಮ್ಯಾಟ್‌ಗಳು, ಕಾಯಿಲ್‌ಗಳು, ಫ್ಯಾನ್‌ಗಳು ಹಾಗೂ ಸಾಂಬ್ರಾಣಿ ಹೊಗೆಯ ಮೊರೆಹೋಗುವುದು ಸಾಮಾನ್ಯ. ಇದು ಮತ್ತೊಂದು ಕ್ಷುಲ್ಲಕ ಜೀವಿ ನನ್ನ ಜೀವನದಲ್ಲಿ ಸವಾಲಾಗಿ ಕಾಡಿದ ಕತೆ. ತಿಗಣೆಗಳ ವಿಚಾರ ಗೊತ್ತಿರಬಹುದು ಅಥವಾ ಅವುಗಳ ಉಪಟಳಕ್ಕೆ ನೀವೂ ತುತ್ತಾಗಿರಬಹುದು. ನಾನು ಪಿಯುಸಿ ಮುಗಿಸುವವರೆಗೂ ತಿಗಣೆಗಳ ಹೆಸರು ಕೇಳಿದ್ದೆನೇ ಹೊರತು ನೋಡುವ ‘ಭಾಗ್ಯ’ ಲಭಿಸಿರಲಿಲ್ಲ. ಸಿನಿಮಾ ಮಂದಿರಗಳಲ್ಲಿ ತಿಗಣೆಗಳು ಇರುತ್ತವೆ ಎಂದು ಹೇಳುತ್ತಿದ್ದರೂ ನಾನು ಸಿನಿಮಾ ನೋಡಲು ಹೋದಾಗ, ಅಲ್ಲಿನ ಕತ್ತಲಿನ ಕಾರಣಕ್ಕೋ, ಸಿನಿಮಾ ಮೋಡಿಗೋ ತಿಗಣೆಗಳ ವಿಚಾರ ಮರೆತು ಹೋಗಿರುತ್ತಿತ್ತು. ಮಲೆನಾಡಿನಲ್ಲಿ ಹಿಂದೆ ತಿಗಣೆಗಳ ಕಾಟ ತುಂಬಾ ಇರುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದರು. ಅವಾಗೆಲ್ಲ್ಲ ಈಚಲು ಗರಿಯಿಂದ ಮಾಡಿದ ಚಾಪೆಗಳನ್ನು ಬಳಸುತ್ತಿದ್ದರು. ಈ ಚಾಪೆಗಳು ತಿಗಣೆಗಳಿಗೆ ತಮ್ಮ ಜೀ...
ದಲ್ಲಿ ೨೦೦೯. ಜುಲೈ,28ರಲ್ಲಿ ಪ್ರಕಟವಾದ ಲೇಖನ ನಮಗೆ ಈತ ಭಯೋತ್ಪಾದಕ. ಅವರಿಗೆ ಬರೀ ‘ಬಂದೂಕುಧಾರಿ!’ ಪ್ರಶಾಂತ್ ಹುಲ್ಕೋಡು ಮಂಗಳವಾರ, 2009 (06:04 IST) ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗೊತ್ತಲ್ಲ. ಅದೇ ಮುಂಬೈ ದಾಳಿ ಪ್ರಕರಣದಲ್ಲಿ ಸೆರೆ ಸಿಕ್ಕ ಏಕೈಕ ಆರೋಪಿ. ಸಧ್ಯ ಪ್ರಪಂಚದ ಮಾಧ್ಯಮಗಳ ಮುಖ ಪುಟದಲ್ಲಿ ಕಸಬ್ ಜಾಗ ಪಡೆದುಕೊಂಡಿದ್ದಾನೆ. ವಿಶೇಷ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ತನ್ನ ಉಡಾಫೆ- ಹಾಗೂ ವಿಚಿತ್ರ ನಡವಳಿಕೆಗಳಿಂದ ಎಲ್ಲರ ಗಮನ ಸೆಳೆದಿರುವ ಕಸಬ್ ಕುರಿತಾದ ಲೇಟೆಸ್ಟ್ ಸುದ್ಧಿಯೊಂದು ಬಂದಿದೆ. ಏನಪ್ಪ ಅಂದ್ರೆ, ಕಸಬ್ ಹಾಗು ಆತನ ಉಳಿದ ೯ ಜನ ಕಳೆದ ನವೆಂಬರ್‌ನಲ್ಲಿ ಮುಂಬೈ ಎಂಬ ಮಹಾನಗರಿಗೆ ಲಗ್ಗೆ ಇಟ್ಟದ್ದು ನಿಮಗೆ ಗೊತ್ತೇ ಇದೆ. ಈಗ ಅವರ ಕೃತ್ಯವನ್ನು ಏನೆಂದು ಕರೆಯಬೇಕು ಎಂದು ಸುದ್ಧಿ ಮನೆಗಳ ಪದ ಪ್ರಯೋಗಶಾಲೆಯಲ್ಲಿ ಸಾಣೆ ಹಿಡಿಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಕಸಬ್ ವಿಚಾರಣೆಗಳನ್ನು ವರದಿ ಮಾಡುತ್ತಿರುವ ಅಮೆರಿಕಾದ ಬಹುತೇಕ ಮಾಧ್ಯಮಗಳು ಕಸಬ್‌ನನ್ನು ಭಯೋತ್ಪಾದಕ ಎಂದು ಕರೆಯುತ್ತಿಲ್ಲ. ನ್ಯೂಯಾರ್ಕ್ ಟೈಮ್ಸ್‌ನಿಂದ ಹಿಡಿದು ವಾಲ್ ಸ್ಟ್ರೀಟ್ ಜರ್ನಲ್‌ವರೆಗೆ ಕಸಬ್ ಗನ್ ಮ್ಯಾನ್ ಅಷ್ಟೆ. ಅಮೆರಿಕಾದ ಪತ್ರಿಕೆಗಳ ಈ ಪದ ಪ್ರಯೋಗ ಸುದ್ಧಿ ಪತ್ರಿಕೆಗಳಲ್ಲಿ ಭಾಷೆ ಬಳಕೆಯ ಕುರಿತಾದ ಹೊಸ ಚರ್ಚೆಗೆ ಕಾರಣವಾಗಿದೆ. ಕಸಬ್ ನ್ಯಾಯಾಲಯದಲ್ಲಿ ಇದ್ದಕ್ಕಿದ್ದ ಹಾಗೆ ‘ನಾನು ತಪ್ಪು ಮಾಡಿದ್ದೇನೆ, ನನ್ನನ್ನು ಗಲ್ಲಿಗೇರಿಸಿ’ ಎಂದು...
ಮಂಗಳೂರು ಡೈರಿ. ಭಾಗ-೩ ತೇಜಸ್ವಿ ಜೊತೆ ನಡೆಯದ ಸಂವಾದ ಪಿಯುಸಿಯ ದಿನಗಳು. ಬಹುಷ ೨೦೦೨ ಇರಬೇಕು. ಅವತ್ತಿಗಾಗಲೇ ಗುಜರಾತ್ ನರಮೇಧ ನಡೆದುಹೊಗಿತ್ತು. ಕರ್ನಾಟಕದ ಬಹುತೇಕ ಬುದ್ದಿಜೀವಿಗಳು ಬಾಬಾಬುಡನ್ ಗಿರಿ ವಿವಾದದಲ್ಲಿ ಸಂಘಪರಿವಾರದ ನಿಲುವನ್ನು ಪ್ರತಿಭಟಿಸಿ ಸುದ್ಧಿಯಲ್ಲಿದ್ದರು. ಆಗಷ್ಟೆ ಹೋರಾಟವೆಂಬ ವಿಸ್ಮಯಕಾರಿ ಜಗತ್ತಿಗೆ ನಾನು ಕಾಲಿಡುತ್ತಿದ್ದ ದಿನಗಳು. ತೀರ್ಥಹಳ್ಳಿಯಲ್ಲಿ ಪಿಯುಸಿಗೆ ಸೇರಿದ್ದೆ. ಮನೆಯಲ್ಲಿ ಸೈನ್ಸ್ ಕೊಡಿಸಿದ್ದರು. ಮಗ ಮುಂದೆ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿ ಎಂಬ ದೂರದ ನಿರೀಕ್ಷೆ ಅಪ್ಪ, ಅಮ್ಮಂಗೆ ಇತ್ತು. ಆದರೆ ನನಗೆ ಪತ್ರಿಕೋದ್ಯಮ ಹುಚ್ಚು ಅಂಟಿಕೊಂಡಿತು. ಅಲ್ಲಿನ ಸ್ಥಳೀಯ ಪತ್ರಿಕೆ ವಿನೂತನ ಮಾತುಕತೆಯಲ್ಲಿ ಸಂಬಳವಿಲ್ಲದ ಕೆಲಸಕ್ಕೆ ಸೇರಿದ್ದೆ. ಆಗ ಇದ್ದದ್ದು ನಾನು ಬರೆಯಬೇಕು, ಹೆಸರು ಮಾಡಬೇಕು ಎಂಬ ಕಲ್ಪನೆಗಳು ಅಷ್ಟೆ. ಆದರೆ ಹೆಚ್ಚು ಕಡಿಮೆ ಅವತ್ತು ನನಗೆ ಗಾಡ್ ಫಾದರ್ ರೂಪದಲ್ಲಿದ್ದ ನೆಂಪೆ ದೇವರಾಜ್ ತೀರ್ಥಹಳ್ಳಿಯಲ್ಲಿ ಸಾಮಾಜಿಕ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಅವರಿಂದಲೇ ನನಗೆ ಬಾಬಾಬುಡನ್ ಗಿರಿ ವಿವಾದದ ಪರಿಚಯವಾಗಿತ್ತು. ಸಂಘಪರಿವಾರದ ಶಾಲೆಯಲ್ಲಿ ಓದಿ ಬೆಳೆದಿದ್ದರೂ, ಅವತ್ತಿಗಾಗಲೇ ಕುವೆಂಪು, ತೇಜಸ್ವಿ ಬರಹಗಳಿಂದ ಆರೆಸ್ಸೆಸ್‌ನ ಹುಸಿ ದೇಶ ಪ್ರೇಮ ಮೈಬಿಟ್ಟು ಹೋಗಿತ್ತು. ಚಿಕ್ಕಮಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆಯ ಎರಡನೆ ವರ್ಷದ ಕಾರ್ಯಕ್ರಮ. ತೀರ್ಥಹಳ್ಳಿಯ ಸಹೃದಯರು, ಕೆಲವು ಹಳೆಯ ತಲೆಮಾ...
ಮಂಗಳೂರು ಡೈರಿ. ಭಾಗ-೨ ಸಕತ್ ಹಾಟ್ ಮಗಾ..! ಸಧ್ಯ ಮಂಗಳೂರಿನಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ನಾನು ಇಲ್ಲಿಗೆ ಬಂದ ಸಮಯದಲ್ಲಿ ಜಡಿ ಮಳೆ ಗುಡಿಸಿಹಾಕುತ್ತಿತ್ತು. ಈಗ ಮಳೆ ಸ್ವಲ್ಪ ಕಡಿಮೆಯಾದ ಕಾರಣಕ್ಕೇನೋ ಬಿಸಿಲಿನ ತಾಪ ಹೆಚ್ಚುತ್ತಿರುವುದು ಬೆನ್ನಲ್ಲಿ ಮೂಡುತ್ತಿರುವ ಬೆವರಿನ ಸಾಲುಗಳು ತಿಳಿಸುತ್ತಿವೆ. ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ಸ್ಥಳೀಯರು, ‘ನೀವು ಬೇಸಿಗೆಯಲ್ಲಿ ಇಲ್ಲಿರಬೇಕು. ಆಗ ಬಿಸಿಲು ಎಂದರೆ ಏನು ಎಂದು ಗೊತ್ತಾಗುತ್ತದೆ’ ಎಂದು ಬೆದರಿಸುತ್ತಿದ್ದಾರೆ. ನಾನು ಕೆಲಸ ಮಾಡುವ ಪತ್ರಿಕಾ ಕಚೇರಿ ಮಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವುದರಿಂದ ಇಲ್ಲಿ ದಿನನಿತ್ಯ ಬಿಸಿಲಲ್ಲಿ ದುಡಿಯುವ ಕಾರ್ಮಿಕರ ಸಮೂಹವೇ ಕಾಣುತ್ತದೆ. ಮಾಸಲು ಬಟ್ಟೆಯ, ಸಾಧಾರಣ ಉಡುಗೆಯ ಸ್ವಲ್ಪ ಕಂದು ಬಣ್ಣದ ವ್ಯಕ್ತಿತ್ವಗಳು. ನಾನಾದರೂ ಆಫೀಸಿನ -ನಿನ ಕೆಳಗೆ ಕುಳಿತು ಕೆಲಸ ಮಾಡುವುದು, ಇವರಂತೆ ಬಿಸಿಲಿನಲ್ಲಿ ದುಡಿಯುತ್ತಿಲ್ಲವಲ್ಲ ಎಂಬ ಸಮಾದಾನವನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಮಂಗಳೂರೆಂದರೆ ಘಟ್ಟದ ಕೆಳಗಿನ ಊರು, ಸಮುದ್ರ ಅಂತೆಲ್ಲ ಕಲ್ಪನೆಗಳಿದ್ದವು ಅಷ್ಟೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದುವಾಗ ಘಟ್ಟದ ಕೆಳಗಿನ ಕೂಲಿಯಾಳುಗಳ ಚಿತ್ರಣ ಬರುತ್ತದೆ. ಆದರೆ ಇವತ್ತು ಮಂಗಳೂರು ಎಂದರೆ ದುಬೈ ದುಡ್ಡಿನಿಂದ ಶ್ರ್ರೀಮಂತವಾದ ಪ್ರದೇಶ ಎಂದು ಸ್ನೇಹಿತರು ಹೇಳುತ್ತಾರೆ. ಆದರೆ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದಿನನಿತ್ಯ ಕಾಣುವ ...